ಕೊಪ್ಪ: ಪಾಳುಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2022-01-16 16:39 GMT
ಸಾಂದರ್ಭಿಕ ಚಿತ್ರ

ಕೊಪ್ಪ, ಜ.16: ಪಾಳು ಬಿದ್ದಿದ್ದ ಮನೆಯೊಂದರಲ್ಲಿ 1 ವರ್ಷದ ಹಿಂದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಕಳೇಬರ ಪತ್ತೆಯಾಗಿರುವ ಘಟನೆ ಪಟ್ಟಣದ ಟಿಎಂ ರಸ್ತೆಯಲ್ಲಿ ರವಿವಾರ ವರದಿಯಾಗಿದೆ.

ಪಟ್ಟಣದ ಟಿಎಂ ರಸ್ತೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಜನರು ವಾಸವಿಲ್ಲದ ಮನೆಯೊಂದು ಇದ್ದು, ಇತ್ತೀಚೆಗೆ ಈ ಮನೆ ಪಾಳು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಮನೆ ಮಾಲಕ ಚಂದ್ರ ಮೋಹನ್ ಎಂಬವರು ಮನೆಯ ದುರಸ್ತಿಗೆ ಮುಂದಾಗಿದ್ದರು. ರವಿವಾರ ಮನೆಯ ದುರಸ್ತಿ ಸಲುವಾಗಿ ಪಾಳು ಬಿದ್ದ ಮನೆಗೆ ಬಂದು ನೋಡಿದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಕಳೇಬರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 1 ವರ್ಷದ ಹಿಂದೆ ಈ ವ್ಯಕ್ತಿ ಯಾರೂ ಇಲ್ಲದ ಈ ಪಾಳು ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಪೊಲೀಸರು ಶಂಕಿಸಿದ್ದು, ಸ್ಥಳದಲ್ಲಿ ವ್ಯಕ್ತಿಯ ಅಸ್ತಿಪಂಜರ ಮಾತ್ರ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News