ಮೇಕೆದಾಟು ಪಾದಯಾತ್ರೆ: ಕಾನೂನು‌ ಕ್ರಮ, ಹೋರಾಟದ ಬಗ್ಗೆ ವರದಿ ನೀಡಲು ಕಾಂಗ್ರೆಸ್ ನಿಂದ ಸಮಿತಿ ರಚನೆ

Update: 2022-01-17 05:25 GMT

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲ ಪ್ರಕರಣಗಳ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಪರಿಶೀಲಿಸಿ ಕಾನೂನು‌ ಕ್ರಮ ಮತ್ತು ಹೋರಾಟದ ಬಗ್ಗೆ ವರದಿ ನೀಡಲು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರು ಐವರು ಸದಸ್ಯರ ಸಮಿತಿ ರಚಿಸಿದ್ದಾರೆ. 

ಕೆಪಿಸಿಸಿ ಕಾನೂನು ಘಟಕದ ಮಾಜಿ ಅಧ್ಯಕ್ಷ ಧನಂಜಯ, ಹೈಕೋರ್ಟ್ ಹಿರಿಯ ವಕೀಲರಾದ ಎಚ್.ಸಿ. ಚಂದ್ರಮೌಳಿ, ಎ.ಜಿ. ಶಿವಣ್ಣ, ಕೆ. ದಿವಾಕರ ಮತ್ತು ಕರ್ನಾಟಕ ವಕೀಲರ ಪರಿಷತ್ ಸದಸ್ಯ ಮುನಿಯಪ್ಪ ಸಮಿತಿಯ ಸದಸ್ಯರಾಗಿದ್ದಾರೆ.

ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಭೇಟಿಯಾಗಿ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿ ಎಲ್ಲ ಪ್ರಕರಣಗಳ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಪರಿಶೀಲಿಸಿ ಕಾನೂನು‌ ಕ್ರಮ ಮತ್ತು ಹೋರಾಟದ ಬಗ್ಗೆ  ಮೂರು ದಿನಗಳ ಒಳಗೆ ವರದಿ ನೀಡಲು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News