ಆಸ್ಪತ್ರೆಯಲ್ಲಿ ಮಹಿಳೆ ಸಾವು: ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Update: 2022-01-17 12:54 GMT

ಬೀದರ್, ಜ.17:  ಚಿಕಿತ್ಸೆಯಲ್ಲಿ ನಿರ್ಲಕ್ಷ ವಹಿಸಿ ಮಹಿಳೆ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಬೀದರ್‍ನ 2ನೆ ಸಿವಿಲ್ ಮತ್ತು ಜೆಎಂಎಫ್‍ಸಿ ಕೋರ್ಟ್ ಮೂವರು ವೈದ್ಯರು ಮತ್ತು ಓರ್ವ ಸಹಾಯಕನಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಬಿರಾದಾರ ಸುಶ್ರುತ ನಸಿರ್ಂಗ್ ಹೋಮ್‍ನ ವೈದ್ಯರಾದ ಡಾ. ರಾಜಶ್ರೀ ಶಿವರಾಜ, ಡಾ. ವೈಜಿನಾಥ ಬಿರಾದಾರ ಮತ್ತು ಸಹಾಯಕ ಸಾಯಿಬಣ್ಣ ಅಂಬಾಟೆ ಅವರಿಗೆ ಕಲಂ 304 (ಎ) ಜತೆ 34 ಐಪಿಸಿ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ, ದಂಡ ಕೊಡದೇ ಇದ್ದಲ್ಲಿ 6 ತಿಂಗಳು ಸಾದಾ ಕಾರಾಗೃಹ  ಶಿಕ್ಷೆ ಹಾಗೂ ಡಾ. ರಾಜಶೇಖರ ಪಾಟೀಲ ಅವರಿಗೆ ಕಲಂ 202 ಜತೆ 34 ಐಪಿಸಿ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ಕೊಡದೇ ಇದ್ದಲ್ಲಿ ಒಂದು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಜೆಎಂಎಫ್‍ಸಿ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣವೇನು: ಕಳೆದ 2014ರ ಡಿ. 12ರಂದು ಸಂಪಾವತಿ ಘಾಳೆಪ್ಪ ಔರಾದಕರ್ ಎಂಬ ಮಹಿಳೆಯನ್ನು ಗರ್ಭಕೋಶದ ಚಿಕಿತ್ಸೆಗಾಗಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿರಾದಾರ ನಸಿರ್ಂಗ್ ಹೋಮ್‍ನಲ್ಲಿ ದಾಖಲು ಮಾಡಲಾಗಿತ್ತು. ಆಸ್ಪತ್ರೆಯ ವೈದ್ಯರಾದ ಡಾ. ರಾಜಶ್ರೀ, ಡಾ. ವೈಜಿನಾಥ ಮತ್ತು ಸಾಯಿಬಣ್ಣ ಅವರು 5 ಗಂಟೆ ಕಾಲ ಸಂಪಾವತಿಗೆ ಚಿಕಿತ್ಸೆ ನೀಡಿ ನಂತರ ಅವರ ಆರೋಗ್ಯದ ಬಗ್ಗೆ ಮಾಹಿತಿ ಕೊಡದೇ ರಾತ್ರಿ ಬೀದರನ ಡಾ. ರಾಜಶೇಖರ ಪಾಟೀಲ ಅವರ ಆಸ್ಪತ್ರೆಗೆ ವರ್ಗಾಯಿಸಿದ್ದರು. ಈ ಬಗ್ಗೆ ವೈದ್ಯರನ್ನು ವಿಚಾರಿಸಿದಾಗ ಈ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇರುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News