ಕೇರಳ ಸರಕಾರದ ಎಡವಟ್ಟಿನಿಂದ ನಾರಾಯಣ ಗುರು ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2022-01-17 15:25 GMT

ಬೆಂಗಳೂರು, ಜ.17: 2018 ಮತ್ತು 2021ರಲ್ಲಿ ಕೇರಳದ ಸ್ತಬ್ಧ ಚಿತ್ರಗಳ ಆಯ್ಕೆಯಾಗಿದ್ದವು. ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ರಕ್ಷಣೆ ನೀಡಲಾಗದ ಕೇರಳದ ಕಮ್ಯುನಿಸ್ಟ್ ಸರಕಾರದ ಎಡವಟ್ಟಿನಿಂದ ಈ ಬಾರಿ ಸ್ತಬ್ಧ ಚಿತ್ರದ ಆಯ್ಕೆಯಾಗಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಪ್ರತಿ ಗಣರಾಜ್ಯೋತ್ಸವಕ್ಕೆ ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸೇರಿ ಒಟ್ಟು 12 ಸ್ತಬ್ಧ ಚಿತ್ರಗಳ ಆಯ್ಕೆ ಮಾಡಲಾಗುತ್ತದೆ. ಕೇಂದ್ರದ ಸ್ತಬ್ಧ ಚಿತ್ರದ ನಿಯಮಾವಳಿ ಹಾಗೂ ಮಾರ್ಗದರ್ಶಿಯನ್ನು ಕೇರಳ ಸರಕಾರ ಸರಿಯಾಗಿ ಪಾಲಿಸದ ಕಾರಣವಾಗಿ ಕೇರಳದ ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರೇ ವಿನಾಕಾರಣ ನೀವು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಿವಾದ ಸೃಷ್ಟಿಸುತ್ತಿರುವುದು ಖಂಡನೀಯ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News