ದ.ಕ. ಜಿಲ್ಲೆಯಲ್ಲಿ 5 ಕ್ಲಸ್ಟರ್ ವಲಯ: ಆರೋಗ್ಯ ಇಲಾಖೆ

Update: 2022-01-18 14:38 GMT

ಮಂಗಳೂರು, ಜ.18:ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಮಂಗಳವಾರ ಜಿಲ್ಲೆಯ 5 ಕ್ಲಸ್ಟರ್ ವಲಯಗಳನ್ನು ದ.ಕ.ಜಿಲ್ಲಾ ಆರೋಗ್ಯ ಇಲಾಖೆಯು ಗುರುತಿಸಿದೆ.

ಬಜ್ಪೆಯ ಖಾಸಗಿ ಶಾಲೆಯೊಂದರ 81 ಮಕ್ಕಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 8 ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿವೆ. ಹಾಗಾಗಿ ಈ ಶಾಲೆಯನ್ನು ಕ್ಲಸ್ಟರ್ ವಲಯವಾಗಿ ಗುರುತಿಸಲಾಗಿದೆ.

ಉಳಿದಂತೆ ಬೆಂಗರೆಯ ಸರಕಾರಿ ಶಾಲೆಯ 45 ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆ ಮಾಡಲಾಗಿದ್ದು, ಆ ಪೈಕಿ 7 ಮಕ್ಕಳಿಗೆ, ಬೋಂದೆಲ್‌ನ ವೃದ್ಧಾಶ್ರಮದ 52 ಮಂದಿಯ ಪೈಕಿ 13 ಮಂದಿಗೆ, ಖಾಸಗಿ ಆಯುರ್ವೇದ ಕಾಲೇಜಿಗೆ ಸಂಬಂಧಿಸಿದ ಹಾಸ್ಟೆಲ್‌ನ 95 ವಿದ್ಯಾರ್ಥಿಗಳ ಪೈಕಿ 20 ಮತ್ತು ಬಂಟ್ವಾಳದ ಮಹಿಳಾ ವಸತಿ ನಿಲಯದ 74 ಮಂದಿಯ ಪೈಕಿ 8 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹಾಗಾಗಿ ಇವುಗಳನ್ನು ಕ್ಲಸ್ಟರ್ ವಲಯವಾಗಿ ಗುರುತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News