ಬೇಲೂರು: ಮಣ್ಣಿನಡಿಯಲ್ಲಿದ್ದ ಪುರಾತನ ಹೊಯ್ಸಳರ ಕಾಲದ ಕಲ್ಲಿನ ಆನೆ ತೆರವು

Update: 2022-01-20 14:08 GMT

ಬೇಲೂರು: ಹೊಯ್ಸಳರ ಕಾಲದ ಸಾವಿರಾರು ವರ್ಷಗಳ ಇತಿಹಾಸ ಇದ್ದ  ಸುಮಾರು 12 ಅಡಿ ಎತ್ತರದ ಕಲ್ಲಿನ ಆನೆಯೊಂದು ಮಣ್ಣಿನಲ್ಲಿ ಮುಚ್ಚಿ ಹೋಗಿದ್ದು,  ಗ್ರಾಮಸ್ಥರ ನೆರವಿನಿಂದ ಅದನ್ನು ಹೊರಗೆ ತೆಗೆಯಲಾಯಿತು.

ತಾಲೂಕಿನ ಕಸಬಾ ಹೋಬಳಿ ಬೆಣ್ಣಿನ ಮನೆ ಗ್ರಾಮದ ಮಂಜುನಾಥ್ ಎಂಬುವವರ ತೋಟದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಹಳೇಯ ಕಲ್ಲಿನ ಆನೆಯೊಂದು ಪತ್ತೆಯಾಗಿತ್ತು. ಸುಮಾರು 1 ವರ್ಷದ ಹಿಂದೆ ಆನೆಯನ್ನು ಎತ್ತಿ ಬೇರೆಡೆ ಇಡಲು ಭೂಮಿಯನ್ನು ಅಗೆದಾಗ ಸುಮಾರು 12 ಅಡಿ ಎತ್ತರ ಹಾಗೂ 10 ಅಡಿ ಉದ್ದ ಇದ್ದ ಕಾರಣ ತೆರವುಗೊಳಿಸದೇ ಬಿಟ್ಟಿದ್ದರು.

ಇದೀಗ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಬೆಣ್ಣಿನಮನೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ನೆರವಿನಿಂದ ಜೆಸಿಬಿ ಹಾಗೂ ಕ್ರೇನ್ ಮೂಲಕ ಬೆಳಗ್ಗೆಯಿಂದ ರಾತ್ರಿಯವರೆಗೂ ತೆಗೆದು ಸುಮಾರು 5 ಟನ್ ಹೆಚ್ಚು ಬಾರವಿರುವ ಆನೆಯನ್ನು ಎತ್ತಿ ನಿಲ್ಲಿಸಲಾಗಿದ್ದು, ಬಳಿಕ ಆನೆಯನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News