ಮಂಗಳೂರು; ಜ.21ರಂದು 'ತುಳು-ಕೊಡವ ಭಾಷೆಗಳ ಅಳಿವು-ಉಳಿವು' ಪುಸ್ತಕ ಬಿಡುಗಡೆ

Update: 2022-01-20 15:36 GMT

ಮಂಗಳೂರು, ಜ.20: ರಾಜ್ಯದ ಅತ್ಯಂತ ಪ್ರಾಚೀನ ಭಾಷೆಗಳಾದ ತುಳು ಮತ್ತು ಕೊಡವವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಸಂಸತ್ತಿನಲ್ಲಿ ಬಿ.ಕೆ. ಹರಿಪ್ರಸಾದ್ ಆಗ್ರಹಿಸುತ್ತಲಿದ್ದರು. ಅವರ ಭಾಷಣದ ಭಾಗವಾದ ತುಳು ಮತ್ತು ಕೊಡುವ ಭಾಷೆಗಳ ಕುರಿತಾದ ಪುಸ್ತಕ 'ತುಳು-ಕೊಡವ ಭಾಷೆಗಳ ಅಳಿವು-ಉಳಿವು' ಇದರ ಬಿಡುಗಡೆ ಕಾರ್ಯಕ್ರಮವು ಜ.21ರ ಸಂಜೆ 3 ಗಂಟೆಗೆ ನಗರದ ಬಲ್ಮಠ ಸಹೋದಯ ಹಾಲ್‌ನಲ್ಲಿ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶ್ರಾಂತ ಕುಲಪತಿ ಪ್ರೊ. ಕೆ.ಚಿನ್ನಪ್ಪಗೌಡ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ 'ವಾರ್ತಾಭಾರತಿ' ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಹಾಗೂ ಕೃತಿ ಸಂಪಾದಕ ಆರ್. ಜಯಕುಮಾರ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News