ಮಂಡ್ಯ: ಹಾಲಿನಲ್ಲಿ ರಾಸಾಯನಿಕ ಬೆರಕೆ ಪತ್ತೆ ಪ್ರಕರಣ; ಸಿಬಿಐ ತನಿಖೆಗೆ ಒತ್ತಾಯ

Update: 2022-01-21 12:14 GMT

ಮಂಡ್ಯ, ಜ.21: ಮಂಡ್ಯ ಹಾಲು ಒಕ್ಕೂಟ(ಮನ್‍ಮುಲ್)ದ ಹಾಲಿಗೆ ನೀರು ಮತ್ತು ರಾಸಾಯನಿಕ ಕಲಬೆರಕೆ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ. ಹಗರಣ ಸಂಬಂಧ ಸಿಐಡಿ ತನಿಖೆ ನಡೆಸುತ್ತಿರುವಾಗಲೇ, ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚೌಡೇಶ್ವರಿ ಹಾಲು ಶೇಖರಣಾ ಮಾರ್ಗದ ಮೂಲಕ ಸರಬರಾಜಾಗುವ ಹಾಲಿನಲ್ಲಿ ಉಪ್ಪಿನಂಶ ರಾಸಾಯನಿಕ ಕಲಬೆರಕೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಕಲಬೆರಕೆ ಹಗರಣ ಯಾವಾಗಿನಿಂದ ನಡೆಯುತ್ತಿದ್ದೆ? ಇದರಲ್ಲಿ ಯಾರು ಶಾಮೀಲಾಗಿದ್ದಾರೆ? ಬೇರೆ ಸಹಕಾರ ಸಂಘಗಳಲ್ಲೂ ನಡೆಯುತ್ತಿದೆಯೇ? ಎಂಬ ಬಗ್ಗೆ ಸಮಗ್ರ ಮಾಹಿತಿಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಿ.ಮಹಾಂತಪ್ಪ, ಸಭಾಗ್ಯ ಆರ್., ಎಂ.ಆರ್.ಶ್ರೀಧರ್, ಬಿ.ಎಸ್.ಮಂಜು, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News