15 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

Update: 2022-01-21 15:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.21: ಸಾರ್ವಜನಿಕ ಶಿಕ್ಷಣ ಇಲಾಕೆಯು 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ, ಸರಕಾರಕ್ಕೆ ಅಧಿಸೂಚನೆಯನ್ನು ಸಲ್ಲಿಸುವ ಮುನ್ನ ಶಿಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. 

ಕರ್ನಾಟಕ ನಾಗರಿಕಾ ಸೇವಾ ಕಾಯ್ದೆಯಡಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ಅರ್ಹ ಇಂಜಿನಿಯರ್ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಅಭ್ಯರ್ಥಿಗಳ ವಯೋಮಿತಿಯನ್ನು ಕನಿಷ್ಠ 21ರಿಂದ 45ಕ್ಕೆ ಏರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯು ಕರಡು ಅಧಿಸೂಚನೆಯಲ್ಲಿ ತಿಳಿಸಿದೆ.  

ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಶೇ.50 ಅಂಕಗಳನ್ನು ಪರಿಗಣಿಸಲಾಗಿದೆ. ಶೇ.20ರಷ್ಟು ಟಿಇಟಿ, ಶೇ.20ರಷ್ಟು ಪದವಿ, ಶೇ.10ರಷ್ಟು ಶಿಕ್ಷಣ ಕೋರ್ಸ್‍ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಪ್ರಾಥಮಿಕ ಶಿಕ್ಷಕರಿಗೆ 14,550 ರೂ. ರಿಂದ 26,700 ರೂ. ವೇತನ ಶ್ರೇಣಿ ಇದ್ದು, ಹುದ್ದೆಗಳಿಗೆ ಸರಕಾರದಿಂದ ಅನುಮೋದನೆ ದೊರೆತ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ವಿಭಾಗದಿಂದ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗುತ್ತದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News