ಅತಿಥಿ ಉಪನ್ಯಾಸಕ ಹುದ್ದೆ: ಅಂತಿಮ ದಿನ ದಾಖಲೆ ಸಂಖ್ಯೆಯ ಅರ್ಜಿ ಸಲ್ಲಿಕೆ!

Update: 2022-01-21 16:10 GMT
ಸಾಂದರ್ಭಿಕ ಚಿತ್ರ- PTI

ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಒಳ್ಳೆಯ ಸ್ಪಂದನ ವ್ಯಕ್ತವಾಗಿದ್ದು, ಕೊನೆಯ ದಿನವಾದ ಶುಕ್ರವಾರ ಒಂದೇ ದಿನ 25 ಸಾವಿರಕ್ಕೂ ಹೆಚ್ಚು ಅರ್ಹರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಒಟ್ಟು 55 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದಂತಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರ ಅಭಿವೃದ್ಧಿ ಪಡಿಸಿರುವ ಆನ್-ಲೈನ್ ಪೋರ್ಟಲ್ ಮೂಲಕ ಅರ್ಜಿ ಕಳಿಸಲು ಶುಕ್ರವಾರ ಅಂತಿಮ ದಿನವಾಗಿತ್ತು. ಗುರುವಾರ ರಾತ್ರಿಯವರೆಗೂ 30,100 ಮಂದಿ ಅರ್ಜಿ ಸಲ್ಲಿಸಿದ್ದರು. ಕೊನೆಯ ದಿನ ದಾಖಲೆ ಸಂಖ್ಯೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾತ್ರಿ 9 ಗಂಟೆವರೆಗೆ ಒಟ್ಟು 55,678 ಅರ್ಜಿಗಳು ಬಂದಿವೆ. ಅರ್ಜಿ ಹಾಕಲು ಮಧ್ಯರಾತ್ರಿಯವರೆಗೂ ಅವಕಾಶವಿದ್ದು, ಕೊನೆಯ ಕ್ಷಣಗಳಲ್ಲಿ ಇನ್ನೂ ನೂರಾರು ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ’ ಎಂದಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿಗೆ ಶೀಘ್ರವೇ ಮೆರಿಟ್ ಪಟ್ಟಿ ಸಿದ್ಧಪಡಿಸಿ, ಮುಂದಿನ ಪ್ರಕ್ರಿಯೆಗಳನ್ನು ಕೂಡ ತ್ವರಿತವಾಗಿ ಮುಗಿಸಲಾಗುವುದು. ಆಯ್ಕೆಯಾಗಲಿರುವ ಅಭ್ಯರ್ಥಿಗಳಿಗೆ ಆದಷ್ಟೂ ಮಟ್ಟಿಗೆ ಅವರ ಆಯ್ಕೆಯ ಕಾಲೇಜುಗಳಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News