ಖಾಸಗಿ, ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳ ಪಿಯುಸಿ ಪರೀಕ್ಷಾ ಶುಲ್ಕ ಪಾವತಿಸಲು ಜ.31 ಕೊನೆಯ ದಿನ

Update: 2022-01-21 17:11 GMT

ಬೆಂಗಳೂರು, ಜ.21: ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳು ಸೇರಿದಂತೆ ಖಾಸಗಿ ಹಾಗೂ ಫಲಿತಾಂಶವನ್ನು ತಿರಸ್ಕರಿಸಿದ್ದ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ವಿಶೇಷ ದಂಡದೊಂದಿಗೆ ಪಾವತಿಸಲು ಜ.31ರವರೆಗೆ ಅವಕಾಶ ಕಲ್ಪಿಸಲಾಗಿದೆ. 

ಕಳೆದ ಬಾರಿ ಜ.17ರವರೆಗೆ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಪೋಷಕರು ಮತ್ತು ವಿದ್ಯಾರ್ಥಿಗಳ ಮನವಿಯನ್ನು ಪರಿಶೀಲಿಸಿ, ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ತಿಳಿಸಿದೆ. 

ಅಭ್ಯರ್ಥಿಗಳು 500 ರೂ. ದಂಡದೊಂದಿಗೆ 1320 ರೂ.ಗಳ ವಿಶೇಷ ದಂಡ ಹಾಗೂ ಶುಲ್ಕವನ್ನು ಜ.31ರೊಳಗೆ ಪಾವತಿಸಬಹುದು. ಕಾಲೇಜು ಆಡಳಿತ ಮಂಡಳಿಯು ಫೆ.2ರೊಳಗೆ ಖಜಾನೆಗೆ ಜಮೆ ಮಾಡಿ ಆನ್‍ಲೈನ್‍ನಲ್ಲಿ ಭರ್ತಿ ಮಾಡಬೇಕು. ಫೆ.4ರೊಳಗೆ ದಾಖಲೆಗಳನ್ನು ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News