ಚಾಮರಾಜನಗರ: ಬಾಲಕಿಯ ಅತ್ಯಾಚಾರ; ಆರೋಪಿ ಅರ್ಚಕನ ಬಂಧನ

Update: 2022-01-25 14:25 GMT
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೇವಾಲಯದ ಅರ್ಚಕರೊಬ್ಬರನ್ನು ತಾಲೂಕಿನ ಬೇಡಗುಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. 

17ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಅದೇ ಗ್ರಾಮದ ಬಸವೇಶ್ವರ ದೇವಾಲಯ ಪೂಜಾರಿ ರವಿ(23) ಎಂಬಾತನನ್ನು ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿ ಬಂಧಿಸಿದ್ದಾರೆ.

ಸಂತ್ರಸ್ತೆಯನ್ನು ಬಾಲಕಿಯರ ಬಾಲಮಂದಿರದ ವಶಕ್ಕೆ ನೀಡಲಾಗಿದೆ.

ಪಿಡಿಒ, ಆಶಾ ಕಾರ್ಯಕರ್ತೆಯಿಂದ ಪ್ರಕರಣ ಬೆಳಕಿಗೆ

ಆಶಾ ಕಾರ್ಯಕರ್ತೆ ಹಾಗೂ ಪಿಡಿಒ ಗ್ರಾಮದಲ್ಲಿ ಕೊರೋನ ಜಾಗೃತಿ ಮೂಡಿಸುತ್ತಿದ್ದಾಗ ಬಾಲಕಿಯನ್ನು ಕಂಡು ಅನುಮಾನಗೊಂಡು. ಬಾಲಕಿಯನ್ನು ವಿಚಾರಿಸಿದ್ದಾರೆ. 

ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ 7 ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದುಬಂದಿದೆ. ಕಾರಣ ಯಾರೆಂದು ವಿಚಾರಿಸಿದಾಗ ಅದೇ ಗ್ರಾಮದ  ಅರ್ಚಕ ರವಿ ಮರಳು ಮಾಡಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ವಿಷಯ ಬೆಳಕಿಗೆ ಬಂದಿದೆ.

ಸದ್ಯ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News