×
Ad

ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

Update: 2022-01-25 20:22 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.25: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗಣರಾಜ್ಯೋತ್ಸವದಂದು ಪ್ರದಾನಿಸುವ 2022ನೆ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 21 ಪೊಲೀಸರು ಭಾಜನರಾಗಿದ್ದಾರೆ.

ಗುಪ್ತಚರ ಇಲಾಖೆಯ ಎಡಿಜಿಪಿ ಬಿ.ದಯಾನಂದ್, ಕ್ರೈಂ ಮತ್ತು ಟೆಕ್ನಿಕಲ್ ಸರ್ವಿಸ್ ಎಡಿಜಿಪಿ ಆರ್.ಹಿತೇಂದ್ರ ಅವರಿಗೆ 2022ನೆ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಲಭಿಸಿದೆ.

ಅದೇರೀತಿ, ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ, ಕೆಎಸ್‍ಆರ್ಪಿ 5ನೆ ಬೆಟಾಲಿಯನ್ ಕಮಾಂಡೆಂಟ್ ರಾಮಯ್ಯಜನಾರ್ದನ್, ಹಲಸೂರು ಉಪವಿಭಾಗ ಎಸಿಪಿ ಡಿ.ಕುಮಾರ್, ಹುಣಸೂರು ಉಪವಿಭಾಗದ ಡಿವೈಎಸ್ಪಿ ಪ್ರಭುದೇವ್ ರವಿಪ್ರಸಾದ್.

ಸಿಂಧನೂರು ಡಿವೈಎಸ್ಪಿ ವೆಂಕಟಪ್ಪ ನಾಯಕ ಓಲೇಕರ್, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಎಂ.ಮಲ್ಲೇಶಯ್ಯ, ಸಿಐಡಿ ಡಿವೈಎಸ್ಪಿ ಸೈಬರ್ ಕ್ರೈಂ ಯಶವಂತಕುಮಾರ್, ಕಲಬುರ್ಗಿ ಸಿಸಿಆರ್‍ಬಿ ಎಸಿಪಿ ಗಂಗಾಧರ್ ಮಠಪತಿ, ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಕೆ.ಎಂ.ರಮೇಶ್, ಸಿಐಡಿ ಡಿವೈಎಸ್ಪಿ ಎಸ್.ಬಿ.ಕೆಂಪಯ್ಯ.

ಲೋಕಾಯುಕ್ತ ಇನ್‍ಸ್ಪೆಕ್ಟರ್ ಎಸ್.ಕೃಷ್ಣಮೂರ್ತಿ, ಬೆಂಗಳೂರಿನ ಕೆಎಸ್‍ಆರ್‍ಪಿ 1ನೆ ಬೆಟಾಲಿಯನ್ ಸಿ.ಎಸ್.ಸಿಂಪಿ, ಬೆಳಗಾವಿ ಡಿಎಆರ್ ಎ.ಆರ್.ಎಸ್.ಐ ಮುಹಮ್ಮದ್ ಹನೀಫ್, ಬೆಂಗಳೂರು ಸಿಪಿ ಕಚೇರಿಯ ಎಸ್ಸೈ ಎಚ್.ಆರ್.ಮುನಿರಾಜಯ್ಯ, ಗದಗ ವಿಭಾಗದ ಡಿಸಿಆರ್‍ಪಿ ಎಎಸ್ಸೈ ಮಾರುತಿ ಶಂಕರ್ ಜೆ., ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯ ಎಎಸ್ಸೈ ವಿಜಯಕಂಚನ್, ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಮುಖ್ಯಪೇದೆ ಶಂಕರ್‍ರಾವ್ ಎಂ.ಎಸ್, ಮೈಸೂರು ಎಸಿಪಿ ಕಚೇರಿಯ ಮುಖ್ಯಪೇದೆ ಲಿಂಗರಾಜಪ್ಪ, ಬೆಂಗಳೂರು ಗುಪ್ತದಳದ ಎಎಚ್‍ಸಿ ಜಿ.ವಿ.ವೆಂಕಟೇಶಪ್ಪ ಅವರು ಭಾಜನರಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News