ಒಂದೇ ಆವರಣದಲ್ಲಿರುವ ಖಾಸಗಿ ಶಾಲೆಗಳ ವಿಲೀನ: ಶಿಕ್ಷಣ ಇಲಾಖೆ ಆದೇಶ

Update: 2022-01-25 17:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.25: ಒಂದೇ ಖಾಸಗಿ ಆಡಳಿತ ಮಂಡಳಿಯು ಒಂದೇ ಆವರಣದಲ್ಲಿ ನಡೆಸುತ್ತಿರುವ ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ ಕೇಂದ್ರ ಪಠ್ಯಕ್ರಮ ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳನ್ನು ವಿಲೀನಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ.

ಒಂದೇ ಆವರಣದಲ್ಲಿ ಶಾಲೆಗಳಿಗೆ ವಿವಿಧ ಹೆಸರಿನಲ್ಲಿ ಪ್ರತ್ಯೇಕ ನೋಂದಣಿ ಪತ್ರಗಳನ್ನು ನೀಡಲಾಗುತ್ತಿದೆ. ಇದರಿಂದ ಯೋಜನೆಗಳ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗೊಂದಲ ಉಂಟಾಗಿ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ. ಹಾಗಾಗಿ ಒಂದೇ ಆವರಣದ ಶಾಲೆಗಳನ್ನು ವಿಲೀನಗೊಳಿಸಿ, ಒಂದೇ ಹೆಸರಿನಡಿ ಒಂದೇ ಡೈಸ್‍ಕೋಡ್ ಹೊಂದುವಂತೆ ನೋಂದಣಿ ಪ್ರಮಾಣ ಪತ್ರ ಪಡೆಯಲು ಆದೇಶಿಸಲಾಗಿದೆ. 

ರಾಜ್ಯ ಪಠ್ಯಕ್ರಮ ಶಾಲೆಗೆ ಎನ್‍ಓಸಿ ಪಡೆದು ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ನಂತರ ರಾಜ್ಯ ಪಠ್ಯಕ್ರಮ ಶಾಲೆಯು ಕೇಂದ್ರ ಪಠ್ಯಕ್ರಮ ಶಾಲೆಯಲ್ಲಿ ವಿಲೀನ ಹೊಂದುತ್ತದೆ. ಹಾಗಾಗಿ ರಾಜ್ಯ ಪಠ್ಯಕ್ರಮ ಶಾಲೆ ರದ್ದಾಗುತ್ತದೆ. ಒಂದಕ್ಕಿಂತ ಹೆಚ್ಚು ಪಠ್ಯಕ್ರಮವನ್ನು ಒಂದೇ ಆವರಣದಲ್ಲಿ ಹಾಗೂ ಒಂದೇ ಕಟ್ಟಡದಲ್ಲಿ ನಡೆಸಲು ಸಿಬಿಎಸ್‍ಸಿ ಬೈಲಾದ ನಿಯಮಗಳಲ್ಲಿ ಇಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News