ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ: ಎಂ.ಬಿ.ಪಾಟೀಲ್

Update: 2022-01-25 17:56 GMT

ಬೆಂಗಳೂರು, ಜ.25: ನನ್ನನ್ನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷನನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವ ಎಐಸಿಸಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಮತ್ತು ಪಕ್ಷದ ನಿರೀಕ್ಷೆಗಳಿಗೆ ತಕ್ಕಂತೆ ಕರ್ತವ್ಯ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಶುಭ ಹಾರೈಕೆ: ರಾಜ್ಯ ಕಾಂಗ್ರೆಸ್‍ನ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಬಿ.ಪಾಟೀಲ್ ಅವರಿಗೆ ಅಭಿನಂದನೆಗಳು. ತಮ್ಮ ಕಾರ್ಯಾವಧಿಯಲ್ಲಿ ಪಕ್ಷ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಸಮಯದ ಗೊಂಬೆಯಾಗದಿರಿ’-ಬಿಜೆಪಿ: ಎಂ.ಬಿ.ಪಾಟೀಲರಿಗೆ ಅಭಿನಂದನೆಗಳು. ನಿಮ್ಮ ಹೊಸ ಜವಾಬ್ದಾರಿ ಧರ್ಮ ವಿಭಜನೆಗೆ ಪ್ರೇರಣೆ ನೀಡದಿರಲಿ ಎಂದು ನಾವು ಆಶಿಸುತ್ತೇವೆ. ಎಂ.ಬಿ.ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ವೀರಶೈವ-ಲಿಂಗಾಯಿತ ಧರ್ಮ ವಿಭಜನೆಗೆ ಕಾರಣೀಕರ್ತರಾಗಿದ್ದರು. ಆಗ ಅವರು ಸಿದ್ದರಾಮಯ್ಯ ಕೈಗೊಂಬೆಯಾಗಿದ್ದರು, ಈಗ ಸಮಯದ ಗೊಂಬೆಯಾಗದಿರಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News