ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಬಳಿಕ ಟ್ವಿಟರ್ ಬಯೋ ಬದಲಾಯಿಸಿದ್ದಾರೆಂಬ ವರದಿಗೆ ಗುಲಾಂ ನಬಿ ಆಝಾದ್ ಕಿಡಿ

Update: 2022-01-26 05:04 GMT

ಹೊಸದಿಲ್ಲಿ: ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಬಳಿಕ ತಮ್ಮ ಟ್ವಿಟ್ಟರ್ ಬಯೋವನ್ನು ಬದಲಾಯಿಸಿದ್ದಾರೆ ಎಂಬ ವರದಿಗಳ ವಿರುದ್ಧ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಕಿಡಿ ಕಾರಿದ್ದಾರೆ ಹಾಗೂ  ಇದು ಕಿಡಿಗೇಡಿತನದ ಪ್ರಚಾರ ಎಂದು ಹೇಳಿದ್ದಾರೆ.

"ಗೊಂದಲ ಸೃಷ್ಟಿಸಲು ಕೆಲವರು ಕಿಡಿಗೇಡಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಟ್ವಿಟರ್ ಪ್ರೊಫೈಲ್‌ಗೆ ಏನನ್ನೂ ತೆಗೆದುಹಾಕಿಲ್ಲ ಅಥವಾ ಸೇರಿಸಲಾಗಿಲ್ಲ. ಪ್ರೊಫೈಲ್ ಮೊದಲಿನಂತೆಯೇ ಇದೆ" ಎಂದು ಗುಲಾಂ ನಬಿ ಆಝಾದ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಆಝಾದ್ ಅವರು ಕಾಂಗ್ರೆಸ್‌ನಲ್ಲಿ "ಜಿ-23" ನ ಪ್ರಮುಖ ಸದಸ್ಯರಾಗಿದ್ದಾರೆ.  ಅವರು 2020 ರಲ್ಲಿ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಸಂಘಟನೆಯಲ್ಲಿ ದೊಡ್ಡ ಸುಧಾರಣೆಗಳು ಮತ್ತು "ದೂರದೃಷ್ಟಿಯ, ಪೂರ್ಣಕಾಲಿಕ ನಾಯಕತ್ವ" ಕ್ಕೆ ಕರೆ ನೀಡಿದ್ದರು. ಅಂದಿನಿಂದ ಅವರು ಪಕ್ಷದಲ್ಲಿ ಗಾಂಧಿ ಕುಟುಂಬದ ನಿಷ್ಠಾವಂತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಹಾಗೂ  ಆಡಳಿತಾರೂಢ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಆಝಾದ್ ಅವರು  ಪದ್ಮ ಪ್ರಶಸ್ತಿಗೆ ಹೆಸರಿಸಿದ ನಂತರ, ಸಿಪಿಎಂ ವರಿಷ್ಠ ಬುದ್ಧದೇಬ್ ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎಂಬ ಅರವಿಂದ್ ಗುಣಶೇಖರ ಅವರ ಟ್ವೀಟ್ ನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ "ಸರಿಯಾದ ಕೆಲಸ ಮಾಡಿದ್ದಾರೆ. ಅವರು  ಆಝಾದ್ ಆಗಲು ಬಯಸುತ್ತಾರೆ, ಗುಲಾಮರಲ್ಲ’’ ಎಂದು ಟ್ವೀಟಿಸಿದರು.

ಮಾಜಿ ಅಧಿಕಾರಿ ಪಿಎನ್ ಹಸ್ಕರ್ ಅವರು ಪ್ರಶಸ್ತಿಯನ್ನು ನಿರಾಕರಿಸಿದ ಬಗ್ಗೆ ರಮೇಶ್ ಅವರು ಪುಸ್ತಕದ ಭಾಗವನ್ನು ಟ್ವೀಟ್ ಮಾಡಿದ್ದಾರೆ.

"ಜನವರಿ 1973 ರಲ್ಲಿ, ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ನಾಗರಿಕ ಸೇವಕನಿಗೆ ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ತೊರೆಯುವಾಗ ಅವರಿಗೆ ಪದ್ಮವಿಭೂಷಣ ನೀಡಲಾಗುವುದು ಎಂದು ಹೇಳಲಾಯಿತು. ಅದಕ್ಕೆ ಪಿ.ಎನ್. ಹಕ್ಸರ್ ಅವರ ಪ್ರತಿಕ್ರಿಯೆ ಇಲ್ಲಿದೆ. ಇದು ಶ್ರೇಷ್ಠ ಮತ್ತು ಅನುಕರಣೆಗೆ ಅರ್ಹವಾಗಿದೆ’’ ಎಂದು ರಮೇಶ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News