×
Ad

ಹೊಗನೇಕಲ್ ಫಾಲ್ಸ್ ನಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಯುವಕ ನೀರುಪಾಲು

Update: 2022-01-27 10:04 IST

ಹನೂರು, ಜ.27: ಯುವಕನೋರ್ವ ಹೊಗನೇಕಲ್ ಫಾಲ್ಸ್ ನಲ್ಲಿ ಪೋಟೋ ತೆಗೆಸಿಕೂಳ್ಳಲು ಹೋಗಿ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ನದಿನೀರುಪಾಲಾದ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.

ಮೃತ ಯುವಕನನ್ನು ನಂಜನಗೂಡು ಮೂಲದ ನಿವಾಸಿ ಎಂದು ಗುರುತಿಸಲಾಗಿದೆ.

ಈತ ಬುಧವಾರ ಸಂಜೆ ಸ್ನೇಹಿತರ ಜತೆ ಹೊಗನೇಕಲ್ ಫಾಲ್ಸ್ ವೀಕ್ಷಣೆಗಾಗಿ ಬಂದಿದ್ದನೆನ್ನಲಾಗಿದೆ. ಈ ವೇಳೆ ನದಿಯ ಮಧ್ಯಭಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ನೀರುಪಾಲಾದ ಯುವಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News