Covid Update: ರಾಜ್ಯದಲ್ಲಿ ಗುರುವಾರ 38,083 ಕೊರೋನ ಪ್ರಕರಣ ದೃಢ, 49 ಮಂದಿ ಸಾವು

Update: 2022-01-27 15:17 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಜ.27: ರಾಜ್ಯದಲ್ಲಿ ಗುರುವಾರ 38,083 ಹೊಸ COVID-19 ಪ್ರಕರಣಗಳು ದೃಢವಾಗಿವೆ. 49 ಮಂದಿ ಸೋಂಕಿಗೆ ಬಲಿಯಾಗಿದ್ದು, 67,236 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 36,92,496ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 38,754ಕ್ಕೆ ತಲುಪಿದೆ.        
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 3,28,711ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಇದನ್ನೂ ಓದಿ: ಕೋವಿಡ್‍ ನಿರ್ವಹಣೆ ಬಗ್ಗೆ ತಜ್ಞರ ವರದಿ ಅನುಸರಿಸಿ ಮುಂದಿನ ತೀರ್ಮಾನ: ಬೊಮ್ಮಾಯಿ

49 ಮಂದಿ ಸಾವು: ಬಾಗಲಕೋಟೆ 1, ಬಳ್ಳಾರಿ 5, ಬೆಳಗಾವಿ 1, ಬೆಂಗಳೂರು ನಗರ 12, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 1, ದಕ್ಷಿಣ ಕನ್ನಡ 4, ಧಾರವಾಡ 1, ಹಾಸನ 4, ಕಲಬುರಗಿ 1, ಕೊಡಗು 1, ಮಂಡ್ಯ 2, ಮೈಸೂರು 5, ರಾಯಚೂರು 2, ರಾಮನಗರ 1, ಶಿವಮೊಗ್ಗ 1, ತುಮಕೂರು 2, ಉಡುಪಿ 2, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 38,083 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ  ಬಾಗಲಕೋಟೆ 345, ಬಳ್ಳಾರಿ 651, ಬೆಳಗಾವಿ 480, ಬೆಂಗಳೂರು ಗ್ರಾಮಾಂತರ 1,091, ಬೆಂಗಳೂರು ನಗರ 17,717, ಬೀದರ್ 250, ಚಾಮರಾಜನಗರ 763, ಚಿಕ್ಕಬಳ್ಳಾಪುರ 665, ಚಿಕ್ಕಮಗಳೂರು 244, ಚಿತ್ರದುರ್ಗ 286, ದಕ್ಷಿಣ ಕನ್ನಡ 678, ದಾವಣಗೆರೆ 257, ಧಾರವಾಡ 1,155, ಗದಗ 267, ಹಾಸನ 1,452, ಹಾವೇರಿ 184, ಕಲಬುರಗಿ 812, ಕೊಡಗು 707, ಕೋಲಾರ 572, ಕೊಪ್ಪಳ 500, ಮಂಡ್ಯ 1802, ಮೈಸೂರು 2587, ರಾಯಚೂರು 261, ರಾಮನಗರ 279, ಶಿವಮೊಗ್ಗ 626, ತುಮಕೂರು 1584, ಉಡುಪಿ 948, ಉತ್ತರ ಕನ್ನಡ 567, ವಿಜಯಪುರ 223, ಯಾದಗಿರಿ ಜಿಲ್ಲೆಯಲ್ಲಿ 130 ಪ್ರಕರಣ ಪತ್ತೆಯಾಗಿವೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News