×
Ad

ಚಿತ್ರನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ

Update: 2022-01-28 23:28 IST

ಬೆಂಗಳೂರು: ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಕಟ್ಟೆ ರಾಮಚಂದ್ರ(75) ಅವರು ಶುಕ್ರವಾರ ಕೋವಿಡ್‌ನಿಂದಾಗಿ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಮೂರು ದಿನಗಳ ಹಿಂದೆ ಅವರ ಪತ್ನಿಯೂ ನಿಧನರಾಗಿದ್ದರು.

ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದ ರಾಮಚಂದ್ರ ಅವರು, ವೈಶಾಖದ ದಿನಗಳು, ಮಹಾಲಕ್ಷ್ಮೀ ಚಿತ್ರಗಳನ್ನು ನಿರ್ಮಿಸಿದ್ದರು. ಮನೆ ಮನೆ ಕಥೆ, ಅಲೆಗಳು ಮತ್ತು ಇತರ ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರ ನಿರ್ದೇಶನದ ‘ಅರಿವು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿತ್ತು.

‘ತನು ನಿನ್ನದು ಮನ ನಿನ್ನದು’ ಧಾರಾವಾಹಿ ನಿರ್ಮಾಣ, ನಿರ್ದೇಶನ ಮಾಡಿದ್ದರು. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News