×
Ad

ಬಣ್ಣ ಬಣ್ಣದ ಜಾಹೀರಾತಿಗೆ ಎಷ್ಟು ಕೋಟಿ ಖರ್ಚು ಮಾಡಿದ್ದಿರಿ?: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

Update: 2022-01-29 18:03 IST

ಬೆಂಗಳೂರು: ''ನೀವು ಮುಖ್ಯಮಂತ್ರಿಯಾಗಿದ್ದಾಗ ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ಎಂದು ಜಾಹೀರಾತು ನೀಡಿದಿರಿ. ಆ ಬಣ್ಣ ಬಣ್ಣದ ಜಾಹೀರಾತಿಗೆ ಎಷ್ಟು ಕೋಟಿ ಖರ್ಚು ಮಾಡಿದ್ದಿರಿ? ಕೊನೆಗೂ ನಿಮ್ಮ‌ಕಾಲದಲ್ಲಿ ಬಯಲು ಬಹಿರ್ದೆಸೆ ನಿಲ್ಲಿಸಲು ಸಾಧ್ಯವಾಯಿತೇ?'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. 

ಇದನ್ನೂ ಓದಿ: ಬೊಮ್ಮಾಯಿ ಅವಧಿಯಲ್ಲಿ ಅಭಿವೃದ್ಧಿಯಾಗಿಲ್ಲ, ಭ್ರಷ್ಟಾಚಾರ ಹೆಚ್ಚಾಗಿದೆ: ಸಿದ್ದರಾಮಯ್ಯ ಆರೋಪ

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,  ''ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಸಿವು ಮುಕ್ತ ಕರ್ನಾಟಕ ಎಂದು ಘೋಷಣೆ ಮಾಡಿದ್ದರು. ಮೋದಿ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಅನ್ನಭಾಗ್ಯದ ಹರಿಕಾರ ಎಂದು ಬಸ್ಸು, ಗೋಡೆಗಳ ಮೇಲೆ ಜಾಹೀರಾತು ಬರೆಸಿಕೊಂಡರು. ಸಿದ್ದರಾಮಯ್ಯನವರೇ, ಅದಕ್ಕೆಲ್ಲ ಮಾಡಿದ ಖರ್ಚೆಷ್ಟು?ಜಾಹಿರಾತು ಸರ್ಕಾರದ ಒಂದು ಉಪಕ್ರಮ ಎಂಬುದು ತಿಳಿದಿಲ್ಲವೇ?'' ಎಂದು ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News