ಕಲಬುರಗಿ: ಬಾವಿಗೆ ಬಿದ್ದು ಶಿಕ್ಷಕ ಮೃತ್ಯು
Update: 2022-01-29 19:10 IST
ಕಲಬುರಗಿ: ನೀರು ತರಲು ಹೋಗಿ ಆಯಾತಪ್ಪಿ ಬಾವಿಗೆ ಬಿದ್ದು ಖಾಸಗಿ ಶಾಲೆಯ ಶಿಕ್ಷಕ ಸಾವನ್ನಪ್ಪಿರುವ ಘಟನೆ ಅಫಜಲಪುರ ತಾಲೂಕು ತೆಲ್ಲೂರ್ ಗ್ರಾಮದಲ್ಲಿ ನಡೆದಿದೆ.
ತೆಲ್ಲೂರ್ ಗ್ರಾಮದ ನಿವಾಸಿ ಮಲ್ಲಣ್ಣ ಮಡಿವಾಳ (30) ಮೃತ ದುರ್ದೈವಿ. ಹೊಲದಲ್ಲಿರುವ ಬಾವಿಯಲ್ಲಿ ನೀರು ತರಲು ಹೋದಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದಾರೆ. ದುರಾದೃಷ್ಟ ಈಜು ಬರದೇ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಮಲ್ಲಣ್ಣ, ಹೊಲದಲ್ಲಿರುವ ಕಡಲೆಗೆ ಕ್ರಿಮಿನಾಶಕ ಔಷಧಿ ಹೊಡೆಯೋದಕ್ಕೆ ನೀರು ತರಲು ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.