ಸಿನೆಮಾ ಥಿಯೇಟರ್‌ಗೂ ಶೇ.100ರಷ್ಟು ಅನುಮತಿ ನೀಡುವಂತೆ ಸಿಎಂ ಬೊಮ್ಮಾಯಿಗೆ ವಾಣಿಜ್ಯ ಮಂಡಳಿ ಮನವಿ

Update: 2022-01-29 18:20 GMT

ಬೆಂಗಳೂರು, ಜ.29: ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶನಿವಾರ ಹಲವು ನಿಯಮಗಳುಳ್ಳ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ ಬೆನ್ನಲ್ಲೇ ಸಿನಿಮಾ ಥಿಯೇಟರ್‌ಗೂ ಶೇ.100ರಷ್ಟು ಅನುಮತಿ ನೀಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. 

ಥಿಯೇಟರ್‌ಗೆ 50-50 ನಿಯಮ ಮುಂದುವರಿಸಲಾಗಿದೆ. ಹೀಗಾಗಿ, ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಅಲ್ಲಿಯೇಯಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ವಾಣಿಜ್ಯ ಮಂಡಳಿ ಸದಸ್ಯರ ಜೊತೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಾವು ಸೋಮವಾರ ಮತ್ತೆ ಸಿಎಂ ಭೇಟಿ ಮಾಡುತ್ತೇವೆ. ಎಸ್‌ಒಪಿ ನಿಯಮಗಳ ಪಾಲನೆ ಮಾಡಿ ಚಿತ್ರಮಂದಿರ ನಡೆಸುತ್ತೇವೆ. ಇದರ ಬಗ್ಗೆ ಸಿಎಂಗೆ ಮಾಹಿತಿ ಕೊಡುತ್ತೇವೆ. ಚಿತ್ರಮಂದಿರಗಳ ಎಸಿ, ನಾನ್ ಎಸಿ ಮಾಹಿತಿ ಕೊಡುತ್ತೇವೆ. ಹಲವು ಚಿತ್ರಗಳು ಬಿಡುಗಡೆಗೆ ಕಾದಿವೆ. ಈಗಾಗಲೇ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿದೆ. ಮುಂದಿನ ಶುಕ್ರವಾರ ಸರಕಾರ ನಿರ್ಬಂಧ ತೆರವು ಮಾಡುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News