×
Ad

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಮೈಸೂರಿನಲ್ಲಿ ಪಂಜಿನ ಮೆರವಣಿಗೆ

Update: 2022-01-30 23:16 IST

ಮೈಸೂರು: ರಾಯಚೂರಿನ ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದ ಜಿಲ್ಲಾ ನ್ಯಾಯಾಧೀಶ  ಮಲ್ಲಿಕಾರ್ಜುನ ಗೌಡ ನಡೆ ಖಂಡಿಸಿ ಮೈಸೂರಿನಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ಪಡುವಾರಳ್ಳಿ ಗ್ರಾಮಸ್ಥರು ರವಿವಾರ ಸಂಜೆ ಪಡುವಾರಹಳ್ಳಿ ವೃತ್ತದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ದೇವಸ್ಥಾನ ಸುತ್ತಾ ಬಳಸಿಕೊಂಡು ಮೈಸೂರು-ಹುಣಸೂರು ರಸ್ತೆವರೆಗೂ ಪಂಜಿನ ಮೆರವಣಿಗೆ ನಡೆಸಿ ವಾಪಸ್ ಪಡುವಾರಹಳ್ಳಿ ಅಂಬೇಡ್ ಪ್ರತಿಮೆ ಬಳಿಗೆ ಬಂದು ಮುಕ್ತಾಯಗೊಳಿಸಿದರು.

ಮೆರವಣಿಗೆಯುದ್ಧಕ್ಕೂ ಮಲ್ಲಿಕಾರ್ಜುನ ಗೌಡರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದೇ ವೇಳೆ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ  ''ಓರ್ವ ಅಜ್ಞಾನಿ ಈ ಮಲ್ಲಿಕಾರ್ಜುನಗೌಡ, ಅಂಬೇಡ್ಕರ್ ಬಗ್ಗೆ ತಿಳಿದಿಲ್ಲ ಎಂದರೆ ಇವನು ನ್ಯಾಯಾಧೀಶನೇ ಅಲ್ಲ, ಇಂತಹ ವ್ಯಕ್ತಿ ದೇಶದಲ್ಲಿ ಇರುವುದೇ ದೊಡ್ಡ ತಪ್ಪು'' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯೆ ಅಶ್ವಿನಿ ಶರತ್, ಮಾಜಿ ಮೇಯರ್ ಪುರುಷೋತ್ತಮ್, ಪಡುವಾರಳ್ಳಿ ಗ್ರಾಮಸ್ಥರುಗಳಾದ ಪ್ರಭು, ಸತೀಶ್, ಕಿರಣ್, ಸುರೇಶ್, ರಾಜಣ್ಣ,ಅಜ್ಜಿ ಮಹದೆವ್ ವಕೀಲ ವಿಷ್ಣು,ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News