×
Ad

'ನನಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಿದ್ದಾರೆ': ಶಾಸಕ ಶ್ರೀಮಂತ ಪಾಟೀಲ್

Update: 2022-01-31 19:34 IST
ಶ್ರೀಮಂತ ಪಾಟೀಲ್

ಬೆಳಗಾವಿ, ಜ.31: ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಮಂತ್ರಿಸ್ಥಾನ ನೀಡುವುದಾಗಿ ಹೈಕಮಾಂಡ್ ಹೇಳಿದೆ ಎಂದು ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ತಪ್ಪಿದೆ. ಹಾಗಾಗಿ, ಈ ಬಾರಿ ಮಂತ್ರಿಸ್ಥಾನ ನೀಡಲಾಗುವುದೆಂದು ಹೈಕಮಾಂಡ್ ಹೇಳಿದೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳುತ್ತಾರೆ ಎಂಬುದೆಲ್ಲಾ ಊಹಾಪೋಹ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಮಾಡಿದರೂ ನಾನು ಬಿಜೆಪಿ ಪಕ್ಷ ಬಿಟ್ಟು ಎಲ್ಲೂ ಹೋಗುವುದಿಲ್ಲ. ರಾಜ್ಯ ಸರಕಾರ ಬಜೆಟ್ ಮಂಡಿಸಲಿರುವುದರಿಂದ ಕ್ಷೇತ್ರದಲ್ಲಿ ಬಸವೇಶ್ವರ ನೀರಾವರಿ ಯೋಜನೆ ಹಣ ಮಂಜೂರು, ಕೆರೆತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಹಣ ಬಿಡುಗಡೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News