×
Ad

ಪಠ್ಯಪುಸ್ತಕದಲ್ಲಿ ಮಲಯಾಳಂ ನಟ ಕುಂಚಾಕೋ ಬಾಬನ್ ಚಿತ್ರ : ಡಿ.ಕೆ. ಸುರೇಶ್ ಟ್ವೀಟ್‌ ಗೆ ಸುರೇಶ್ ಕುಮಾರ್ ತಿರುಗೇಟು

Update: 2022-02-01 10:51 IST
photo: instagram.com/

ಬೆಂಗಳೂರು: ರಾಜ್ಯದ ತರಗತಿಯೊಂದರ ಪುಸ್ತಕದಲ್ಲಿ "ಅಂಚೆಯಣ್ಣ" ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಬೇಕು' ಎಂದು  ಕೇಳಿರುವ ಸಂಸದ ಡಿ.ಕೆ.ಸುರೇಶ್ ಅವರ ಅವಸರದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿದ್ದ ಡಿ.ಕೆ.ಸುರೇಶ್, ಬಿಜೆಪಿ ಸರಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕವು ಇಡೀ ದೇಶದ ಎದಿರು ತಲೆತಗ್ಗಿಸುವಂತಾಗಿದೆ. ಮಲಯಾಳಂ ಚಿತ್ರನಟ ಕುಂಚಾಕೋ ಬಾಬನ್ ಅವರ ಚಿತ್ರವನ್ನು ಕರ್ನಾಟಕ ಸರಕಾರವು ಶಾಲಾ ಪಠ್ಯಪುಸ್ತಕದಲ್ಲಿ ಅಂಚೆಯಣ್ಣನ ಶೀರ್ಷಿಕೆ ಜತೆ ಅಚ್ಚು ಹಾಕಿದೆ. ಈ ಪ್ರಮಾದದ ಬಗ್ಗೆ ಸ್ವತಃ ಬಾಬನ್ ಟ್ವೀಟ್ ಮಾಡಿ ಕರ್ನಾಟಕ ಸರಕಾರದ ಕಾಲೆಳೆದಿದ್ದಾರೆ' ಎಂದು ಗಮನ ಸೆಳೆದಿದ್ದಾರೆ ಎಂದು ತಿಳಿಸಿದ್ದರು.

ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಎಸ್.ಸುರೇಶ್ ಕುಮಾರ್ , ಡಿಕೆ ಸುರೇಶ್ ರವರೇ,ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು.ಇದು ಖಂಡಿತ ನಮ್ಮ ರಾಜ್ಯದ  ಶಿಕ್ಷಣ ಇಲಾಖೆ ಪ್ರಕಟಿಸಿರುವ  ಆಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ.(ಇದರ ಫೋಟೋ ಲಗತ್ತಿಸಿದ್ದೇನೆ) ಎಂದು ಹೇಳಿದ್ದಾರೆ. 

ʼʼರಾಜ್ಯ ಪಠ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲದ‌, ಯಾವುದೋ ಖಾಸಗಿ ಸಂಸ್ಥೆಯವರು  ಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರವನ್ನು ತೋರಿಸಿ ಅದನ್ನೂ ಸಹ  ಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣ ವೆಂದು ಬಣ್ಣಿಸುವ ನಿಮ್ಮ ಪ್ರಯತ್ನಕ್ಕೆ‌ ಅರ್ಥವಿಲ್ಲ. ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು.ಅಥವಾ ನೀವೇ ದಾರಿ ತಪ್ಪಿರಬೇಕು!ʼʼ ಎಂದು ಟೀಕಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News