×
Ad

ಎಚ್.ಡಿ.ಕೋಟೆ: ರಾಜಕೀಯ ಜಂಜಾಟಕ್ಕೆ ಬ್ರೇಕ್ ಹಾಕಿ ರಿಲ್ಯಾಕ್ಸ್ ಮೂಡ್‍ಗೆ ಜಾರಿದ ಸಿದ್ದರಾಮಯ್ಯ

Update: 2022-02-01 22:11 IST

ಮೈಸೂರು,ಫೆ.1: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮೆಲ್ಲಾ ರಾಜಕೀಯ ಜಂಜಾಟ ಬಿಟ್ಟು ಕಳೆದ ಎರಡು ದಿನಗಳಿಂದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರಿವ ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ವಿರಮಿಸುತ್ತಿದ್ದಾರೆ.

ಎಚ್.ಡಿ.ಕೋಟೆ ಬಳಿಯ ಕಾಕನ ಕೋಟೆ ಕಾಡಿನಲ್ಲಿ ಮಂಗಳವಾರ ಬೆಳಿಗ್ಗೆ ಸ್ನೇಹಿತರ ಜೊತೆ ಸಫಾರಿ ನಡೆಸಿ ಕಾಡಿನಲ್ಲಿ ಸುತ್ತಾಡಿ ಸಂಭ್ರಮಿಸಿದ್ದಾರೆ.

ಬಳಿಕ ಕಬಿನಿ ಹಿನ್ನೀರಿನಲ್ಲೂ ದೋಣಿಯಲ್ಲಿ ಸುತ್ತಾಡಿ ಅಲ್ಲಿನ ಪರಿಸರ ಕಂಡು ಸಂತೋಸಗೊಂಡಿರುವ ಸಿದ್ದರಾಮಯ್ಯ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಟ್ಟಿಗೆ ಕಾಡಿನಲ್ಲಿ  ತಮ್ಮ ಕ್ಯಾಮೆರಾದಲ್ಲೇ ಹುಲಿ, ಜಿಂಕೆ, ಕಾಡೆಮ್ಮೆ, ನವಿಲು ಫೋಟೋಗಳನ್ನು ಸ್ವತಃ ಕ್ಲಿಕ್ಕಿಸಿದ್ದಾರೆ.

ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ - ಡಾ.ಎಚ್.ಸಿ.ಮಹದೇವಪ್ಪರೊಡಗೂಡಿ ಸಂಚಾರ ನಡೆಸಿದ್ದಾರೆ.

ಬಳಿಕ ಮಾಜಿ ಸಚಿವ ಎಚ್.ಎ.ವೆಂಕಟೇಶ್, ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಜೊತೆಯಲ್ಲಿ ಸಿದ್ದರಾಮಯ್ಯ ಮತ್ಯು ಡಾ.ಎಚ್.ಸಿ.ಮಹದೇವಪ್ಪ ಉಪಹಾರ ಸೇವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News