ಒಂದೇ ದಿನ ಮಾರ್ಕ್ ಝುಕರ್‌ ಬರ್ಗ್ ರ 31 ಶತಕೋಟಿ ಡಾಲರ್ ಸಂಪತ್ತು ನಷ್ಟ !

Update: 2022-02-04 01:59 GMT
ಮಾರ್ಕ್ ಝುಕರ್‌ ಬರ್ಗ್

ನ್ಯೂಯಾರ್ಕ್: ಮೆಟಾ ಪ್ಲಾಟ್‌ ಫಾರ್ಮ್ ಇನ್‌ಕಾರ್ಪೊರೇಷನ್‌ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳು ವಿಶ್ಲೇಷಕರ ನಿರೀಕ್ಷೆಯ ಮಟ್ಟ ತಲುಪದ ಹಿನ್ನೆಲೆಯಲ್ಲಿ ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ ಸಂಭವಿಸಿದ ಕುಸಿತದಿಂದಾಗಿ ಮಾರ್ಕ್ ಝುಕರ್‌ ಬರ್ಗ್ ಅವರ ಸಂಪತ್ತಿನಲ್ಲಿ 31 ಶತಕೋಟಿ ಡಾಲರ್ ಒಂದೇ ದಿನ ನಷ್ಟವಾಗಿದೆ. ಇದು ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಕುಸಿತವಾಗಿದೆ.

ಬುಧವಾರದ ಗಳಿಕೆ ಬಳಿಕ ಮೆಟಾ ಐತಿಹಾಸಿಕ ಷೇರು ಕುಸಿತವನ್ನು ಗುರುವಾರ ದಾಖಲಿಸಿತು. ಹಿಂದಿನ ಅವಧಿಗೆ ಹೋಲಿಸಿದರೆ ಮಾಸಿಕ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಯಾವುದೇ ಪ್ರಗತಿ ಆಗದಿರುವುದು ಕಂಪನಿಯ ಭವಿಷ್ಯದ ಪ್ರಗತಿ ಬಗ್ಗೆ ಆತಂಕ ಹುಟ್ಟುಹಾಕಿದೆ. ನ್ಯೂಯಾರ್ಕ್‌ನಲ್ಲಿ ಗುರುವಾರ ಮೆಟಾ ಷೇರುಗಳು ಶೇಕಡ 24ರಷ್ಟು ಕುಸಿತ ಕಂಡವು.

ಈ ಮಹಾ ಕುಸಿತದ ಬಳಿಕ ಮೆಟಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಕರ್‌ ಬರ್ಗ್ ಅವರ ಒಟ್ಟು ಸಂಪತ್ತು ಮೌಲ್ಯ 120.6 ಶತಕೋಟಿ ಡಾಲರ್‌ನಿಂದ 92 ಶತಕೋಟಿ ಡಾಲರ್‌ಗೆ ಇಳಿಯಿತು ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದಿಂದ ತಿಳಿದು ಬಂದಿದೆ. ಇದರಿಂದಾಗಿ 2015ರ ಜುಲೈನಿಂದ ವಿಶ್ವದ ಹತ್ತು ಮಂದಿ ಅತಿ ಶ್ರೀಮಂತರ ಪಟ್ಟಿಯಿಂದ ಝುಕರ್‌ ಬರ್ಗ್ ಹೊರಬಿದ್ದಿದ್ದಾರೆ.

ಇದುವರೆಗಿನ ಷೇರು ಮಾರುಕಟ್ಟೆ ಇತಿಹಾಸದಲ್ಲಿ 31 ಶತಕೋಟಿ ಡಾಲರ್‌ಗಳ ನಷ್ಟ ಒಂದೇ ದಿನದಲ್ಲಿ ಆಗಿರುವುದು ಎರಡನೇ ಮಹಾ ಕುಸಿತವಾಗಿದೆ. ಇದಕ್ಕೂ ಮುನ್ನ ಟೆಸ್ಲಾ ಇನ್‌ಕಾರ್ಪೊರೇಷನ್ ಷೇರುಗಳ ಕುಸಿತದಿಂದಾಗಿ ಕಳೆದ ನವೆಂಬರ್‌ನಲ್ಲಿ ಎಲಾನ್ ಮಸ್ಕ್ ಅವರ ಸಂಪತ್ತು ಒಂದೇ ದಿನ 35 ಶತಕೋಟಿ ಡಾಲರ್‌ನಷ್ಟು ನಷ್ಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News