×
Ad

ಮೈಸೂರು: ಎನ್‍ಟಿಎಂ ಶಾಲೆ ಸ್ಥಳಾಂತರಗೊಳಿಸಿರುವುದನ್ನು ವಿರೋಧಿಸಿ ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ

Update: 2022-02-04 22:03 IST

ಮೈಸೂರು,ಫೆ.4: ಎನ್ ಟಿ ಎಂ ಶಾಲೆಯನ್ನು ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳವರು ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು. 

ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ ಹೋರಾಟ ಮಾಡಲು ನಮಗೆ ಗಾಂಧಿ ಹೇಳಿಕೊಟ್ಟಿದ್ದಾರೆ. ನೂರೆಂಟು ವಿಧಾನಗಳಿವೆ. ಒಂದೊಂದನ್ನೆ ಅಪ್ಲೈ ಮಾಡುತ್ತೇವೆ. ಮನೆಮನೆಗೆ ಹೋಗಿ ಕನ್ನಡ ಜನರನ್ನು ಹೋರಾಟಕ್ಕೆ ಕರೆದಿದ್ದೇವೆ. ಅವರು ಬಂದಿದ್ದಾರೆ. ಇಡೀ ಮೈಸೂರು ನಮ್ಮ ಪರವಾಗಿದೆ. ನನಗೆ ಸಂಪೂರ್ಣವಾಗಿ ಗೊತ್ತು. ಕನ್ನಡದ ಪರವಾಗಿದೆ. ಚೆನ್ನಾಗಿರುವ ಶಾಲೆಯನ್ನು ಯಾಕೆ ಮುಚ್ಚಬೇಕು ಎಂಬ ಪ್ರಶ್ನೆಯನ್ನು ಕೇಳುವ ಲಕ್ಷ ಜನರಿದ್ದಾರೆ. ಈ ಹೋರಾಟಕ್ಕೆ ಕೈ ಹಚ್ಚಬೇಕು. ಇದು ಅನಿವಾರ್ಯವಾಗಿ ನಮ್ಮನ್ನು ನಿನ್ನೆ ಬಂಧಿಸಿದರು. ಡಿಡಿಪಿಐ ಕರೆಸಲು ಹೇಳಿದರೆ ಕರೆಸಿಲ್ಲ, ಅವರು ಬಂದೇ ಇಲ್ಲ. ನಾವು ನ್ಯಾಯಾಂಗದ ಮೊರೆ ಹೋಗಿದ್ದೇವೆ. ಸುಪ್ರೀಂಕೋರ್ಟ್ ನ ಮೊರೆ ಹೋಗಿದ್ದೇವೆ ಎಂದರು.

ಇಡೀ ಆಸ್ತಿ ಹೊಡೆದುಕೊಳ್ಳೋದಕ್ಕೆ ಖಾತೆ ಮಾಡಿಸಿ ಬಿಟ್ಟಿದ್ದರು. ಆದರೆ ಇವರಿಗೆ ಹಕ್ಕಿರುವುದು 36,000ಚದರ್ ಅಡಿ. 46ಸಾವಿರ ಚದರಡಿ ಹಾಕಿಕೊಂಡಿದ್ದರು. ಅದು ಪ್ರಾಡ್. ಆ ಪ್ರಾಡ್ ಗೋಸ್ಕರ ನಾವು ಅವರ ಮೇಲೆ ಕೇಸು ಹಾಕಲು ಹೋದ್ವಿ. ಈಗ ತಿದ್ದುಪಡಿ ಮಾಡಿ 36ಸಾವಿರ ಚದರಡಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಪಾಲಿಕೆಯವರು ಇದಕ್ಕೆ ಶಾಮೀಲಾಗಿದ್ದಾರೆ. ಇಡೀ ಮೈಸೂರಿನ ಎಲ್ಲ ಜನರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಈ ಹೋರಾಟಕ್ಕೆ ಬನ್ನಿ, ನಿರ್ಣಾಯಕವಾದ ಹೋರಾಟವನ್ನು ಮಾಡೋಣ. ಯಾವುದೇ ಕಾರಣಕ್ಕೂ ಈ ಶಾಲೆಯನ್ನು ಬೇರ್ಪಡಿಸದೆ ನಡೆಸುವಂತೆ ಹೋರಾಟ ಮಾಡೋಣ ಎಂದರು.

ಶಾಲೆಯ ಆವರಣದೊಳಕ್ಕೆ ನುಗ್ಗಲು ಯತ್ನಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ರೈತ ಮುಖಂಡ ಹೊಸಕೋಟೆ ಬಸವರಾಜು, ನಂದೀಶ್, ಕೆ.ಎಸ್.ಶಿವರಾಮ್, ಉಗ್ರನರಸಿಂಹೇಗೌಡ, ಸೇರಿದಂತೆ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News