×
Ad

ಶಾಲೆ-ಕಾಲೇಜುಗಳಲ್ಲಿ ಧರ್ಮ ತರುವುದು ಸರಿಯಲ್ಲ: ಸತೀಶ್ ಜಾರಕಿಹೊಳಿ

Update: 2022-02-04 22:39 IST

ಬೆಳಗಾವಿ, ಫೆ. 4: `ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹಿಜಾಬ್(ಸ್ಕಾರ್ಫ್) ಮತ್ತು ಕೇಸರಿ ಶಾಲು ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಎಲ್ಲ ಕಡೆಗೆ ಹಬ್ಬಿದರೆ ಬಹಳ ದೊಡ್ಡ ಸಮಸ್ಯೆಯಾಗಲಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, `ಅವರವರ ಜಾತಿ-ಧರ್ಮ ಅವರ ಜೊತೆಯೇ ಇರುತ್ತದೆ. ಆದರೆ, ಶಾಲೆ ಕಾಲೇಜುಗಳಲ್ಲಿ ಜಾತಿ-ಧರ್ಮ ತರುವುದು ಸರಿಯಲ್ಲ. ಸರಕಾರ ಈ ಹಿಜಾಬ್, ಕೇಸರಿ ಶಾಲು ವಿವಾದ ತಡೆಯಲು ಮುಂದಾಗಬೇಕು' ಎಂದು ಸಲಹೆ ನೀಡಿದರು.

`ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಲ್ಲ. ಆದರೆ, ಧರ್ಮದ ವ್ಯವಸ್ಥೆ ಆ ರೀತಿ ಮಾಡುತ್ತಿದೆ. ಮೊದಲು ಧರ್ಮಗಳನ್ನು ಪೂರ್ಣ ಅಧ್ಯಯನ ಮಾಡಬೇಕು. ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಹೋಗಬೇಕೆಂದು ಯಾವುದೇ ಧರ್ಮವೂ ಹೇಳಿಲ್ಲ. ಆದರೆ, ಈ ವಿಚಾರದಲ್ಲಿ ಕೆಲ ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News