×
Ad

ಖಾಲಿ ಹುದ್ದೆ ಭರ್ತಿ ಕುರಿತು ಜಾಲತಾಣದಲ್ಲಿ ಹರಿದಾಡುತ್ತಿರುವ ಜ್ಞಾಪನಾ ಪತ್ರ ನಕಲಿ: ಆರೋಗ್ಯ ಇಲಾಖೆ ಸ್ಪಷ್ಟನೆ

Update: 2022-02-04 22:45 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ. 4: `ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಸರಿನಲ್ಲಿ `ಖಾಲಿ ಇರುವ ವಿವಿಧ ವೃಂದಗಳ ನೇಮಕಾತಿ' ಜನವರಿ 24ರಂದು ಹೊರಡಿಸಲಾಗಿರುವ ಅಧಿಕೃತ ಜ್ಞಾಪನಾ ಪತ್ರವು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗ್ರೂಪ್‍ಗಳಲ್ಲಿ ಹರಿದಾಡುತ್ತಿದ್ದು. ಅದು ಸುಳ್ಳಿನ ಖೊಟ್ಟಿ ಅಧಿಕೃತ ಜ್ಞಾಪನಾ ಪತ್ರವಾಗಿದೆಯೆಂದು ಆರೋಗ್ಯ ಇಲಾಖೆ ಸ್ಪಷ್ಟೀಕರಿಸಿದೆ.

ಶುಕ್ರವಾರ ಈ ಸಂಬಂಧ ಆರೋಗ್ಯ ಇಲಾಖೆ ಟ್ವಿಟ್ಟರ್ ಮೂಲಕ ಸ್ಪಷ್ಟಣೆ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ನೇಮಕಾತಿಗಳಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಮಾತ್ರ ಪ್ರಕಟಿಸಲಾಗುವುದೆಂದು ಸಾರ್ವಜನಿಕರಿಗೆ ಮತ್ತು ಉದ್ಯೋಗಾಂಕ್ಷಿಗಳಿಗೆ ಈ ಮೂಲಕ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News