×
Ad

ದೇಶ ಬಿಟ್ಟು ಹೋಗಿ ಎಂದು ಹೇಳುವುದಕ್ಕೆ ನೀವು ಯಾರು: ಸಂಸದ ಪ್ರತಾಪ್ ಸಿಂಹಗೆ ಶಾಸಕ ತನ್ವೀರ್ ಸೇಠ್ ಪ್ರಶ್ನೆ

Update: 2022-02-05 17:09 IST

ಮೈಸೂರು: ಕ್ರಿಶ್ಚಿಯನ್ನರಿಗೊಂದು ದೇಶ, ಮುಸಲ್ಮಾನರಿಗೆ ಒಂದು ದೇಶ ಎಂದು ಹೇಳಲು ಈ ದೇಶ ನಿಮ್ಮ ತಾತನದ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ನಮ್ಮದು, ನಾವು ಇಲ್ಲೇ ಹುಟ್ಟಿರುವುದು, ಇಲ್ಲೇ ಸಾಯುವುದು. ಈ ದೇಶ ಬಿಟ್ಟು ಬೇರೆ ದೇಶ ನಮಗೆ ಗೊತ್ತಿಲ್ಲ, ಈ ದೇಶ ಬಿಟ್ಟು ಹೋಗಿ ಎನ್ನುವುದಕ್ಕೆ ನೀವು ಯಾರು? ಎಂದು ಖಾರವಾಗೆ ಪ್ರಶ್ನಿಸಿದರು‌.

ಎಲ್ಲವನ್ನು ಕೇವಲ ಓಟ್ ಬ್ಯಾಂಕ್ ದೃಷ್ಟಿಯಿಂದ ನೋಡಬೇಡಿ, ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ವಿಚಾರಗಳ ಬಗ್ಗೆ ಮಾತನಾಡುವುದನ್ನು ಕಲಿಯಿರಿ, ನಿಮ್ಮ ಹೇಳಿಕೆಗಳು ಸಮಾಜವನ್ನು ಹೊಡೆಯುಂತದ್ದಾಗಬಾರದು ಎಂದು ಸಲಹೆ ನೀಡಿದರು.

ಈ ದೇಶವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಟ್ಟಲಾಗಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನೀವು ಹಿಜಾದ್ ಬೇಡ ಅಂದರೆ, ನಾವು ಕುಂಕುಮ ಬೇಡಿಕೆಯ, ಹೂ ಬೇಡ ಎಂದು ಹೇಳಿದರೆ ಪರಿಸ್ಥಿತಿ ಏನಾಗಬೇಡ? ಇದನ್ನು ಅರಿತು ನೀವು ಮಾತನಾಡಬೇಕು, ಮಕ್ಕಳಲ್ಲಿ ವಿಷ ತುಂಬುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ, ಕಡ್ಡಾಯ ಮಾಡಿದರೆ ಕ್ರಮ ಎಂಬ ನಿಯಮವಿದೆ. ಆದರೂ ಈ ವಿಚಾರ ಈಗ ವಿವಾದವಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಈ ಸೂಕ್ಷ್ಮ ವಿಚಾರವನ್ನು ವಿವಾದ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಶಾಸಕ ರಘುಪತಿ ಭಟ್ ಮತ್ತು ವಕ್ಫ್ ಬೋಡ್೯ ಅಧ್ಯಕ್ಷರ ವಿರುದ್ಧವೂ ಅಸಮಾಧನ ವ್ಯಕ್ತಪಡಿಸಿದ ಶಾಸಕ ತನ್ವೀರ್ ಸೇಠ್,   ವಕ್ಫ್ ಬೋಡ್೯ ಅಧ್ಯಕ್ಷರು ವಕ್ಫ್ ಬೋಡ್೯ ಗೆ ಸಂಬಂಸಿದಂತಹ ಕೆಲಸಗಳನ್ನು ಮಾಡಬೇಕು, ಇದು ಶಿಕ್ಷಣದ ವಿವಾರ, ಹಾಗಾಗಿ ಶಿಕ್ಷಣ ಇಲಾಖೆ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು, ಇನ್ನೂ ಶಾಸಕ ರಘುಪತಿ ಭಟ್ ಸರ್ಕಾರಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಿರಬಹುದು. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News