×
Ad

ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಹಿಜಾಬ್ ಹೆಸರಿನಲ್ಲಿ ಕೋಮು ದ್ವೇಷಕ್ಕೆ ಮುಂದಾಗಿದೆ: ಡಾ.ಎಚ್.ಸಿ.ಮಹದೇವಪ್ಪ ಟೀಕೆ

Update: 2022-02-06 18:05 IST

ಬೆಂಗಳೂರು, ಫೆ. 6: `ಕಳ್ಳನಿಗೊಂದು ಪಿಳ್ಳೆ ನೆವ' ಎಂಬಂತೆ ಎಂದೂ ಇಲ್ಲದ ಹಿಜಾಬ್(ಸ್ಕಾರ್ಫ್) ಪ್ರಕರಣವನ್ನು ಮುನ್ನೆಲೆಗೆ ತಂದಿರುವ ಬಿಜೆಪಿಗರು, ಕೆಳವರ್ಗದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸುವ ಹುನ್ನಾರ ಹೊಂದಿದ್ದು, ಶಾಲೆಯ ಆದರ್ಶಮಯ ವಾತಾವರಣವನ್ನು ಧಾರ್ಮಿಕ ಕಲಹದ ಕೇಂದ್ರವನ್ನಾಗಿ ಮಾರ್ಪಡಿಸಲು ಹೊರಟಿರುವುದು ಸಂವಿಧಾನ ಬಾಹಿರವಾದ ಕೆಲಸ. ಇದನ್ನು ಎಲ್ಲರೂ ಖಂಡಿಸಬೇಕು!' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಚುನಾವಣೆ ಇನ್ನೊಂದು ವರ್ಷ ಬಾಕಿ ಇರುವುದರಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಸರಕಾರ ಈಗ ಅನಿವಾರ್ಯವಾಗಿ ಕೋಮು ದ್ವೇಷವನ್ನು ಹಬ್ಬಿಸಿ ಜನರಲ್ಲಿ ಗೊಂದಲ ಉಂಟು ಮಾಡುವ ಹಾದಿಯನ್ನು ಹಿಡಿದಿದ್ದು ತಮ್ಮ ರಾಜಕೀಯ ಲಾಭಕ್ಕೆ ಮಕ್ಕಳ ಶಿಕ್ಷಣವನ್ನು ಭ್ರಷ್ಟಗೊಳಿಸುವಂತಹ ಪರಮ ಪಾಪದ ಕೆಲಸವನ್ನು ಮಾಡುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

`ಇದೆಲ್ಲಕ್ಕಿಂತಲೂ ಮುಖ್ಯವಾಗಿ ಕೋವಿಡ್ ಲಾಕ್‍ಡೌನ್ ನಂತರದಲ್ಲಿ ದೇಶದ ಭವಿಷ್ಯದ ರೂಪಕವಾಗಿರುವ ಮಕ್ಕಳ ಶಿಕ್ಷಣವು ಪಾತಾಳಮುಖಿಯಾಗಿ ಸಾಗಿದ್ದು ಶಿಕ್ಷಣಕ್ಕೆ ಸಂಬಂಧಿಸಿದಂತಹ ಸರಕಾರದ ಗೊಂದಲಮಯ ನಿರ್ಧಾರಗಳು ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನೇ ದೂರ ಮಾಡಿದ್ದು ಶಾಲೆ ಬಿಟ್ಟು ದುಡಿಮೆಗೆ ಹೊರಟವರ ಸಂಖ್ಯೆ ಜಾಸ್ತಿಯಾಗುತ್ತಿದೆ' ಎಂದು ಮಹದೇವಪ್ಪ ಇದೇ ವೇಳೆ ಗಮನ ಸೆಳೆದಿದ್ದಾರೆ.

`ಬಿಜೆಪಿ ಸರಕಾರದ ಆಡಳಿತಾತ್ಮಕ ಯೋಗ್ಯತೆ ಎಷ್ಟು ಎಂಬುದಕ್ಕೆ ಅವರ ಈ ಮೂರುವರೆ ವರ್ಷದ ದುರಾಡಳಿತವು ಜೀವಂತ ಸಾಕ್ಷಿಯಾಗಿದೆ. ಕೊರೋನದಂತಹ ಸಾಂಕ್ರಾಮಿಕ ರೋಗ ಬಂದಾಗ ಅದನ್ನು ಇವರು ನಿರ್ವಹಿಸಲಾರದ ನೀತಿ ರೋಗದ ಹೆಸರಲ್ಲಿ ಆಚರಿಸಿದ ಮೌಢ್ಯತೆಯನ್ನು ಎಲ್ಲರೂ ಕಣ್ಣಾರೆ ಕಾಣುತ್ತಿದ್ದೇವೆ' ಎಂದು ಡಾ.ಮಹದೇವಪ್ಪ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News