×
Ad

ಬೆಂಗಳೂರು: ದೋಷಯುಕ್ತ ಶ್ರವಣ ಸಾಧನ ನೀಡಿದ್ದಕ್ಕೆ ಕೋರ್ಟ್‍ನಿಂದ 2.5 ಲಕ್ಷ ರೂ.ದಂಡ!

Update: 2022-02-06 20:03 IST

ಬೆಂಗಳೂರು, ಫೆ. 6: ಶ್ರವಣ ಸಮಸ್ಯೆಯನ್ನು ಹೊಂದಿದ್ದ ವ್ಯಕ್ತಿಯೊಬ್ಬರಿಗೆ ದೋಷಪೂರಿತ ಶ್ರವಣ ಸಾಧನ(ಹಿಯರಿಂಗ್ ಡಿವೈಸ್) ನೀಡಿದ್ದ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ನಗರದ ಎರಡನೆ ಹೆಚ್ಚುವರಿ ಜಿಲ್ಲಾ ಗ್ರಾಹಕ ಕೋರ್ಟ್, 2.5 ಲಕ್ಷ ರೂಪಾಯಿ ಮರುಪಾವತಿಸುವಂತೆ ಆದೇಶಿಸಿದೆ.  

ವಾರಂಟಿ ಅವಧಿಯಲ್ಲಿದ್ದ ದೋಷಯುಕ್ತ ಶ್ರವಣ ಸಾಧನವನ್ನು ಹಿಂಪಡೆದು ಹೊಸ ಸಾಧನವನ್ನೂ ನೀಡದೆ, ಹಣವನ್ನು ಮರುಪಾವತಿಸದೆ ಸೇವಾ ನ್ಯೂನತೆ ಎಸಗಲಾಗಿದೆ ಎಂದು ಆರೋಪಿಸಿ ನಗರದ ಆರ್‍ಬಿಐ ಲೇಔಟ್‍ನ ವ್ಯಕ್ತಿಯೊಬ್ಬರು ಗ್ರಾಹಕ ಕೋರ್ಟ್‍ಗೆ ದೂರು ನೀಡಿದ್ದರು. 

ಈ ದೂರನ್ನು ಮಾನ್ಯ ಮಾಡಿರುವ ಗ್ರಾಹಕ ಕೋರ್ಟ್, ಹಿಯರಿಂಗ್ ಡಿವೈಸ್‍ಗೆ ದೂರುದಾರರು ಪಾವತಿಸಿದ್ದ 2.5 ಲಕ್ಷ ರೂ.ಗಳನ್ನು ಮರುಪಾವತಿಸುವ ಜತೆಗೆ, 50 ಸಾವಿರ ರೂ.ಪರಿಹಾರ ಪಾವತಿಸಬೇಕು. ಪದೇ ಪದೇ ಅಲೆದಾಡುವಂತೆ ಮಾಡಿದ್ದಕ್ಕೆ ಸಾರಿಗೆ ವೆಚ್ಚ 5 ಸಾವಿರ ರೂ.ಹಾಗೂ ವ್ಯಾಜ್ಯದ ವೆಚ್ಚ 5 ಸಾವಿರ ರೂ.ಪಾವತಿಸಬೇಕು ಎಂದು ಶ್ರವಣ ಚಿಕಿತ್ಸಾ ಕೇಂದ್ರ ಹಾಗೂ ಹಿಯರಿಂಗ್ ಡಿವೈಸ್ ತಯಾರಿಕಾ ಸಂಸ್ಥೆಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News