ಹೈನುಗಾರಿಕೆ ಹಾಗೂ ಮೀನುಗಾರಿಕೆ ವಲಯದಲ್ಲಿ ಉಚಿತ ತರಬೇತಿ ಅರ್ಜಿ ಆಹ್ವಾನ
ಬೆಂಗಳೂರು, ಫೆ. 6: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಹೈನುಗಾರಿಕೆ ಹಾಗೂ ಮೀನುಗಾರಿಕೆ ವಲಯದಲ್ಲಿ ಉಚಿತ ತರಬೇತಿ ಮತ್ತು ಸ್ವ-ಉದ್ಯೋಗ ನೀಡಲು ಅರ್ಜಿ ಆಹ್ವಾನಿಸಲಾಗಿದೆ
ಕರ್ನಾಟಕ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಸಹಾಯದೊಂದಿಗೆ ಮೀನು ಕೃಷಿಕರಿಗೆ ಮೀನು ಮರಿಗಳ ಉತ್ಪಾದನೆ ಹಾಗೂ ಕಾರ್ಯ ನಿರ್ವಹಣೆ ಕುರಿತಂತೆ ಉಚಿತ ತರಬೇತಿ ನೀಡಲು ಹೆಬ್ಬಾಳದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ ಇಲ್ಲಿ ಅರ್ಜಿ ಆಹ್ವಾನಿಸಲಾಗಿದೆ, ವಯಸ್ಸು 18 ರಿಂದ 35ರ ಒಳಗಿನವರಾಗಿದ್ದು 10ನೆ ತರಗತಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ.
ತರಬೇತಿಯ ಅವಧಿ 25 ದಿನಗಳು ಇರುತ್ತದೆ. ತರಬೇತಿ ಪಡೆಯಲಿಚ್ಚಿಸುವ ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಫೆ.10 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ನಿಬಂಧನೆಗಳು ಸೇರಿದಂತೆ ನಿಮ್ಮ ವಿವರಗಳನ್ನು https://skillconnect.kaushalkar.com/ ಈ ಮೂಲಕ ನೊಂದಾದಾಯಿಸತಕದ್ದು. ಹೆಚ್ಚಿನ ವಿವರಗಳಿಗೆ ಇ-ಮೇಲ್ ಐಡಿ: Lr:fricbangalore@gmail.com ಮೊ.ಸಂಖ್ಯೆ: 99457 83906/97405 70657ನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.