×
Ad

ವಿಜಯಪುರ: ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು; ಇಂಡಿ ಪಟ್ಟಣದ ಕಾಲೇಜಿಗೆ ರಜೆ ಘೋಷಣೆ

Update: 2022-02-07 10:47 IST

ವಿಜಯಪುರ: ಕರಾವಳಿ ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ  'ಹಿಜಾಬ್‌- ಕೇಸರಿ ಶಾಲುʼ  ಪ್ರಕರಣ ಇದೀಗ ರಾಜ್ಯದ ಇತರ ಜಿಲ್ಲೆಗಳಿಗೂ ವ್ಯಾಪಿಸಿದೆ. 

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಜಿಆರ್ ಜಿ ಪದವಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ  ಕಾಲೇಜಿಗೆ ಆಗಮಿಸಿದ್ದಾರೆ.  

ಇದರಿಂದ ತಕ್ಷಣ ಜಾಗೃತರಾದ ಆಡಳಿತ ಮಂಡಳಿ ವಿವಾದಕ್ಕೆ ಕಾರಣವಾಗಬಾರದು ಎಂದು ಶಾಲೆಗೆ ರಜೆ ಘೋಷಿಸಿದೆ.

ಇನ್ನು 'ಉಡುಪಿ, ಕುಂದಾಪುರದಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುವ ಉದ್ದೇಶದಿಂದ ನಾವು ಕೇಸರಿ ಶಾಲು ಧರಿಸಿ  ಕಾಲೇಜಿಗೆ ಬಂದಿದ್ದೇವೆ' ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 

ಈ ಕುರಿತು 'ವಾರ್ತಾ ಭಾರತಿ' ಶಾಲೆ-ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರನ್ನು ಮಾಹಿತಿಗಾಗಿ ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರು ಸಂಪರ್ಕಕ್ಕೆ ಸಿಗಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News