×
Ad

ಚಿಕ್ಕಮಗಳೂರು: ಹಿಜಾಬ್–ಕೇಸರಿ ಶಾಲು ಧರಿಸಿದವರಿಗೆ ಐಡಿಎಸ್‌ಜಿ ಕಾಲೇಜಿನಲ್ಲಿ ಪ್ರವೇಶ ನಿರಾಕರಣೆ

Update: 2022-02-08 12:11 IST

ಚಿಕ್ಕಮಗಳೂರು: ನಗರದ ಐಡಿಎಸ್‌ಜಿ ಕಾಲೇಜಿನ ಪ್ರವೇಶ ದ್ವಾರದಲ್ಲಿ ಗುರುತಿನ ಪತ್ರ ತಪಾಸಣೆ ಮಾಡಿ ವಿದ್ಯಾರ್ಥಿಗಳನ್ನು ಒಳಬಿಡಲಾಗುತ್ತಿದ್ದು,  ಹಿಜಾಬ್– ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದಾರೆ. 

ನಗರದ ಐ.ಡಿ.ಎಸ್.ಜಿ.ಕಾಲೇಜಿಗೆ ಕೇಸರಿ ಶಾಲು ಧರಿಸಿ ಕಾಂಪೌಂಡ್ ಹಾರಿ ಕೆಲವು ವಿದ್ಯಾರ್ಥಿಗಳು ಕಾಲೇಜು ಆವರಣಕ್ಕೆ ಆಗಮಿಸಿ ತರಗತಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. 

ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಕೇಸರಿ ಹಾಗೂ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳಿಗೆ ಒಳಕ್ಕೆ ಪ್ರವೇಶ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News