×
Ad

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Update: 2022-02-08 15:28 IST
ಸಾಂದರ್ಭಿಕ ಚಿತ್ರ

ಬೆಂಗಳೂರು : ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳ ದಿನಾಂಕವನ್ನು ಕರ್ನಾಟಕ ಪಿಯು ಬೋರ್ಡ್ ಪ್ರಕಟಿಸಿದೆ. ಎಪ್ರಿಲ್16ರಿಂದ ಮೇ6ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದೆ. ದಿನಬಿಟ್ಟು ದಿನ ಪರೀಕ್ಷೆ ನಡೆಯಲಿರು ವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವಾರ್ಷಿಕ ಪರೀಕ್ಷೆಯ ದಿನಾಂಕವನ್ನು ಇಂದು ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದೆ

ಎ 16ರಂದು - ಗಣಿತ, ಶಿಕ್ಷಣ, ಬೇಸಿಕ್ ಗಣಿತ , ಎ18ರಂದು - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಎ 19 ರಂದು - ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ವೆಲ್‌ನೆಸ್ ಪರೀಕ್ಷೆ ನಡೆಯಲಿದೆ.

ಎ 20ರಂದು - ಇತಿಹಾಸ, ರಾಜ್ಯಶಾಸ್ತ್ರ, ಎ 21ರಂದು - ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್, ಏ 22ರಂದು - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ನಡೆಯಲಿದೆ.

ಎ 23ರಂದು - ಕರ್ನಾಟಿಕ್ ಮ್ಯೂಸಿಕ್, ಹಿಂದುಸ್ತಾನಿ ಮ್ಯೂಸಿಕ್, ಸೈಕಾಲಜಿ, ಕೆಮಿಸ್ಟ್ರಿ, 25 - ಎಕನಾಮಿಕ್ಸ್, ಎ.26 ರಂದು - ಹಿಂದಿ ಪರೀಕ್ಷೆ ನಡೆಯಲಿದೆ. ಎ. 28ರಂದು ಕನ್ನಡ, ಎ. 30ರಂದು ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಪರೀಕ್ಷೆ ನಡೆಯಲಿದೆ.

ಮೇ 2ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ, ಮೇ 4ರಂದು ಇಂಗ್ಲಿಷ್, ಮೇ 5ರಂದು - ಐಚ್ಚಿಕ ಕನ್ನಡ, ಭೂಗರ್ಭ ಶಾಸ್ತ್ರ ಗೃಹವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News