×
Ad

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪ: ಆಯುಕ್ತರ ಭೇಟಿಗೆ ಮುಂದಾದ ಬಿಜೆಪಿ ಶಾಸಕ

Update: 2022-02-08 22:48 IST

ಬೆಂಗಳೂರು, ಫೆ.8: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ, ಬೆದರಿಕೆ, ವಂಚನೆ ಎಸಗಿರುವ ಆರೋಪಕ್ಕೆ ಸಿಲುಕಿರುವ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು.

ಮಂಗಳವಾರ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಭೇಟಿಗೆ ರಾಜಕುಮಾರ್ ಪಾಟೀಲ್ ತೇಲ್ಕೂರ ತೆರಳಿದರು. ಆದರೆ, ಆಯುಕ್ತರು ಸಭೆಯಲ್ಲಿ ನಿರತರಾಗಿದ್ದ ಕಾರಣ ಭೇಟಿಗೆ ಅವಕಾಶ ಸಿಗಲಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ್ ಪಾಟೀಲ್ ತೇಲ್ಕೂರ, ಈ ಪ್ರಕರಣದಲ್ಲಿ ಕಾನೂನು ಏನು ಆದೇಶ ಮಾಡಲಿದೆ, ಅದಕ್ಕೆ ತಲೆಬಾಗಿ ಸ್ವೀಕಾರ ಮಾಡುತ್ತೇನೆ. ಆಕೆ ಮಾಡಿರುವ ಆರೋಪಗಳಿಗೆ ನಾನು ಉತ್ತರಿಸಲ್ಲ. ಅಲ್ಲದೆ, ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ ಎಂದು ಅವರು ಹೇಳಿದರು.

ಪ್ರಕರಣ ಕುರಿತು ಮಾಹಿತಿ ನೀಡಲು ಆಯುಕ್ತ ಕಮಲ್ ಪಂತ್ ಅವರಿಗೆ ಭೇಟಿಗೆ ಆಗಮಿಸಿದ್ದೆ. ಆದರೆ, ನಾನು ಮೊದಲು ಸಮಯ ನಿಗದಿ ಮಾಡಿಕೊಳ್ಳದ ಹಿನ್ನೆಲೆ ಅವರು ಸಹ ತುರ್ತು ಕೆಲಸಗಳಲ್ಲಿ ನಿರತರಾಗಿದ್ದು, ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News