ಹಿಜಾಬ್ ಗೆ ಅಡ್ಡಿ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ
Update: 2022-02-09 13:36 IST
ಬೆಂಗಳೂರು, ಫೆ.9: ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ನಿರ್ಬಂಧ, ಅಡ್ಡಿಯುಂಟು ಮಾಡುತ್ತಿರುವುದನ್ನು ಖಂಡಿಸಿ ಕಲಬುರಗಿಯಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತು.
ಜೀಲಾನಾಬಾದ್ ಯೂತ್ ನೇತೃತ್ವದಲ್ಲಿ ಜೀಲಾನಾಬಾದ್ ಬಡಾವಣೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾಕಾರರು ಹಿಜಾಬ್ ಪರ ಘೋಷಣೆಗಳನ್ನು ಕೂಗಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಂತರ ಮಾಜಿ ಮಹಾಪೌರ ಸಜ್ಜಾದ್ ಅಲಿ ಇನಾಮದಾರ್, ಹಿಜಾಬ್ ಇಸ್ಲಾಂ ಧರ್ಮದ ಸಂಸ್ಕೃತಿಯಾಗಿದೆ. ಇದನ್ನು ತಡೆಯಲು, ನಿರ್ಬಂಧ ಹೇರಲು ಯಾರಿಂದಲೂ ಸಾಧ್ಯವಲ್ಲ. ಹಿಜಾಬ್ ಸಮುದಾಯದ ಮಹಿಳೆಯರ ಹಕ್ಕಾಗಿದೆ ಎಂದು ತಿಳಿಸಿದರು.