ರಾಜ್ಯದಲ್ಲಿ ಬುಧವಾರ 5,339 ಮಂದಿಗೆ ಕೊರೋನ ದೃಢ: 48 ಮಂದಿ ಮೃತ್ಯು
ಬೆಂಗಳೂರು, ಫೆ.9: ರಾಜ್ಯದಲ್ಲಿ ಬುಧವಾರ 5,339 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 48 ಮಂದಿ ಸೋಂಕಿಗೆ ಬಲಿಯಾಗಿದ್ದು, 16,749 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3912100ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 39,495ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 60,956ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
48 ಮಂದಿ ಸಾವು: ಬಾಗಲಕೋಟೆ 1, ಬಳ್ಳಾರಿ 4, ಬೆಂಗಳೂರು ನಗರ 16, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 3, ದಕ್ಷಿಣ ಕನ್ನಡ 5, ಧಾರವಾಡ 2, ಗದಗ 1, ಹಾವೇರಿ 1, ಕೋಲಾರ 2, ಮಂಡ್ಯ 2, ಮೈಸೂರು 2, ರಾಮನಗರ 1, ಶಿವಮೊಗ್ಗ 2, ತುಮಕೂರು 3, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 5,339 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 67, ಬಳ್ಳಾರಿ 173, ಬೆಳಗಾವಿ 327, ಬೆಂಗಳೂರು ಗ್ರಾಮಾಂತರ 69, ಬೆಂಗಳೂರು ನಗರ 2161, ಬೀದರ್ 28, ಚಾಮರಾಜನಗರ 111, ಚಿಕ್ಕಬಳ್ಳಾಪುರ 70, ಚಿಕ್ಕಮಗಳೂರು 53, ಚಿತ್ರದುರ್ಗ 136, ದಕ್ಷಿಣ ಕನ್ನಡ 103, ದಾವಣಗೆರೆ 28, ಧಾರವಾಡ 132, ಗದಗ 31, ಹಾಸನ 139, ಹಾವೇರಿ 55, ಕಲಬುರಗಿ 111, ಕೊಡಗು 119, ಕೋಲಾರ 50, ಕೊಪ್ಪಳ 25, ಮಂಡ್ಯ 158, ಮೈಸೂರು 293, ರಾಯಚೂರು 75, ರಾಮನಗರ 32, ಶಿವಮೊಗ್ಗ 185, ತುಮಕೂರು 342, ಉಡುಪಿ 97, ಉತ್ತರ ಕನ್ನಡ 60, ವಿಜಯಪುರ 103, ಯಾದಗಿರಿ ಜಿಲ್ಲೆಯಲ್ಲಿ 6 ಪ್ರಕರಣ ಪತ್ತೆಯಾಗಿವೆ.
ರಾಜಧಾನಿಯಲ್ಲಿ 2,161 ಜನರಿಗೆ ಕೊರೋನ ದೃಢ
ರಾಜಧಾನಿಯಲ್ಲಿ ಬುಧವಾರದಂದು 2,161 ಜನರಿಗೆ ಕೊರೋನ ಸೋಂಕು ದೃಢಪಟ್ಟಿವೆ. 16 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು 17,23,340 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 17,64,476 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,724 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.