ಬಿಜೆಪಿಯವರು ಗೋ ರಕ್ಷಣೆಯ ಹೆಸರಿನಲ್ಲಿ ಗೋಮಾಳವನ್ನೇ ಕಬಳಿಸಲು ಹೊರಟಿದ್ದಾರೆ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ

Update: 2022-02-09 17:51 GMT

ಮೈಸೂರು,ಫೆ.9: ತಮ್ಮನ್ನು ತಾವು ಗೋ ರಕ್ಷಕರು ಎಂದು ಕರೆದುಕೊಂಡಿರುವ ಬಿಜೆಪಿಯ ಸ್ವ ಘೋಷಿತ ಗೋರಕ್ಷಕರು ಇದೀಗ ರಾಜ್ಯದ ವಿವಿಧೆಡೆ ಇರುವ ಲಕ್ಷಾಂತರ ಎಕರೆ ಗೋಮಾಳವನ್ನು ಕಬಳಿಸಲು ಹೊಂಚು ಹಾಕಿದ್ದು ಅದಕ್ಕಾಗಿ ಈಗಾಗಲೇ ಇರುವ ಸರ್ಕಾರದ ನೀತಿ ನಿಯಮಗಳ ಜೊತೆಗೇ ತಮ್ಮ ಭೂ ಕಬಳಿಕೆಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಲು ಹೊರಟಿರುವುದು ಅತ್ಯಂತ ಬೇಜವಾಬ್ದಾರಿ ನಡೆಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಪಶುಗಳಿಗೆ ಮೇವು ದೊರಕುವ ತಾಣವಾಗಿರುವ ಗೋಮಾಳಗಳನ್ನು ಲಪಟಾಯಿಸಲು ನೀತಿ ನಿಯಮಗಳನ್ನು ಬದಲಿಸುವ ಕೆಲಸ ಮಾಡುತ್ತಿರುವ ಬಿಜೆಪಿಗರು ಗೋ ರಕ್ಷಣೆಯ ಹೆಸರಲ್ಲಿ ಗೋಮಾಳವನ್ನೇ ಕಬಳಿಸಲು ಹೊರಟಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇನ್ನು ಅಚ್ಚರಿ ಎಂದರೆ ಇದೇ ಗೋಮಾಳದ ಭೂಮಿಯನ್ನು ಆರೆಸ್ಸೆಸ್ ಶಿಕ್ಷಣ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ದರಕ್ಕೆ ನೀಡಲು ಹೊರಟಿರುವ ಬಿಜೆಪಿಗರ ಗೋಮಾಳವನ್ನು ಆಕ್ರಮಿಸುವ ಹುನ್ನಾರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ '' ಎಂದಿದ್ದಾರೆ.

ಸರ್ಕಾರವು ಪಶು ಸಂಗೋಪನೆಗೆ ಪೂರಕವಾದ ಗೋಮಾಳದ ಭೂಮಿಯನ್ನು ಆಕ್ರಮಿಸುವ ನೀತಿಗಳನ್ನು ಕೈಬಿಡಬೇಕು ಎಂದು  ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News