ʼʼಗಾಜಿನ ಮನೆಯಲ್ಲಿದ್ದೀರಿ ಹುಶಾರ್ʼʼ : ಡಿಕೆಶಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಎಚ್ಚರಿಕೆ
Update: 2022-02-10 12:25 IST
ಬೆಂಗಳೂರು: ʼʼಗಾಜಿನ ಮನೆಯಲ್ಲಿದ್ದೀರಿ ಡಿಕೆಶಿ ಹುಶಾರ್, ಮಾತು ನಿಮ್ಮೊಬ್ಬರ ಸ್ವತ್ತಲ್ಲ'ʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರ ಬಟ್ಟೆ ಬಗ್ಗೆ ರೇಣುಕಾಚಾರ್ಯ ಅವರ ಹೇಳಿಕೆ ಸಂಬಂಧ ಬುಧವಾರ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ʼರೇಣುಕಾಚಾರ್ಯ ಮುತ್ತುರಾಜ ಅವರ ಬಗ್ಗೆ ಮಾತನಾಡಲ್ಲʼ ಎಂದು ಹೇಳಿದ್ದರು.
ಇದನ್ನೂ ಓದಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂದ ಎಂ.ಪಿ ರೇಣುಕಾಚಾರ್ಯ
ಇದೀಗ ಫೇಸ್ ಬುಕ್ ಪೋಸ್ಟ್ ಮಾಡಿರುವ ರೇಣುಕಾಚಾರ್ಯ, ʼʼಅತಿಯಾಗಿ 'ಲಕ್ಷ್ಮೀ'ವರಿಸಲು ಹೋಗಿ ತಿಹಾರ್ ಜೈಲಿಗೆ ಹೋದವರಿಗೆ ನನ್ನ ಬಗ್ಗೆ ಮಾತನಾಡವ ನೈತಿಕತೆ ಇಲ್ಲ! ಗಾಜಿನ ಮನೆಯಲ್ಲಿದ್ದೀರಿ ಡಿಕೆಶಿ ಹುಶಾರ್...! ಮಾತು ನಿಮ್ಮೊಬ್ಬರ ಸ್ವತ್ತಲ್ಲʼʼ ಎಂದು ತಿರುಗೇಟು ನೀಡಿದ್ದಾರೆ.