ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಏಮ್ಸ್ ನಲ್ಲಿ ಸೀಟು
ಬೀದರ್, ಫೆ.11: ಇಲ್ಲಿನ ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಏಮ್ಸ್)ನಲ್ಲಿ ಸೀಟು ಗಳಿಸಿದ್ದಾರೆ.
ಶ್ವೇತಾ ರಾಠೋಡ್ ಹೊಸದಿಲ್ಲಿ, ಫಾತಿಮಾ ಶೇಖ್ ರಾಯಪುರ, ಹರ್ಷಾ ನಿಕೇತ ಹಾಗೂ ನಿಶಾತ್ ಭೋಪಾಲ್‍ನ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಸ್ಥಾನ ಗಳಿಸಿದ್ದಾರೆ.
ಸನ್ಮಾನ: ಹೊಸದಿಲ್ಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಸ್ಥಾನ ಪಡೆದ ಶ್ವೇತಾ ರಾಠೋಡ್ ಅವರನ್ನು ಕಾಲೇಜಿನಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ನೀಟ್ ಸ್ನಾತಕ ಕೌನ್ಸೆಲಿಂಗ್‍ನ ಅಖಿಲ ಭಾರತ ಕೋಟಾದ ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟವಾಗಿದ್ದು, ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಪ್ರತಿಷ್ಠಿತ ಏಮ್ಸ್‍ಗಳಲ್ಲಿ ಸೀಟು ಗಳಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಫಲವಾಗಿ ಕಾಲೇಜು ಪ್ರತಿ ವರ್ಷ ನೀಟ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಲೇ ಇದೆ. ಈ ವರ್ಷ 400 ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ವೇತಾ, ಶಾಹೀನ್ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಅನುಭವಿ ಉಪನ್ಯಾಸಕರು ಇದ್ದಾರೆ. ಗುಂಪು ಅಧ್ಯಯನ ವಿಧಾನದಿಂದ ನೀಟ್‍ನಲ್ಲಿ ಸಾಧನೆಗೈಯಲು ಹೆಚ್ಚು ನೆರವಾಯಿತು ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ಖಾಜಾ ಪಟೇಲ್, ಅಫ್ರನಾಝ್ ಮೊದಲಾದವರು ಇದ್ದರು.