×
Ad

ಬೀದರ್:‌ ಹಿಜಾಬ್‌ ಧರಿಸಿದ ನರ್ಸಿಂಗ್‌ ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಹಾಜರಾಗದಂತೆ ತಡೆದ ಬ್ರಿಮ್ಸ್‌ ಸಿಬ್ಬಂದಿ

Update: 2022-02-11 16:41 IST
Photo: Screenshots from Twitter

ಬೀದರ್:‌ ಬೀದರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಬ್ರಿಮ್ಸ್) ಸಿಬ್ಬಂದಿಗಳು ಹಿಜಾಬ್ ಧರಿಸಿದ ಮುಸ್ಲಿಂ ಹುಡುಗಿಯರನ್ನು ಫೆಬ್ರವರಿ 10 ರಂದು ಬಿಎಸ್‌ಸಿ ನರ್ಸಿಂಗ್ ಪರೀಕ್ಷೆಗೆ ಹಾಜರಾಗಲು ಅನುಮತಿಸಲಿಲ್ಲ ಎಂದು The.Hindu ವರದಿ ಮಾಡಿದೆ.

ಪರೀಕ್ಷಾ ಹಾಲ್‌ ಬಳಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ತಡೆಯುತ್ತಿರುವ ವೀಡಿಯೊ ಕ್ಲಿಪ್ ಅನ್ನು ಅದ್ನಾನ್ ಇಮ್ತಿಯಾಜ್ ಎಂಬ ವಿದ್ಯಾರ್ಥಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಪರೀಕ್ಷಕರು ಹುಡುಗಿಯರನ್ನು ಪರೀಕ್ಷೆ ಹಾಲ್‌ಗೆ ಪ್ರವೇಶಿಸದಂತೆ ತಡೆಯುತ್ತಿರುವುದು ಮತ್ತು ಯಾರೂ ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ಕಾವಲು ಕಾಯುವುದು ಕಾಣಬಹುದು. ಪರೀಕ್ಷೆಗೆ ಹಾಜರಾಗಬೇಕೆಂದಿದ್ದರೆ ಹಿಜಾಬ್ ಅನ್ನು ತೆಗೆದುಹಾಕುವಂತೆ ಅವರನ್ನು ಒತ್ತಾಯಿಸಲಾಗಿದೆ.

ಈ ಕುರಿತು ಬ್ರಿಮ್ಸ್‌ನ ನಿರ್ದೇಶಕ ಚಂದ್ರಕಾಂತ ಚಿಲ್ಲರಗಿ ಮಾತನಾಡಿ, ಫೆಬ್ರವರಿ 10 ರಂದು ಹೊರಡಿಸಲಾದ ಹೈಕೋರ್ಟ್‌ನ ಮೌಖಿಕ ಆದೇಶವನ್ನು ಸಿಬ್ಬಂದಿಗಳು ಅನುಸರಿಸುತ್ತಿದ್ದಾರೆ ಎಂದಿದ್ದಾರೆ.

 ಸದ್ಯ ಟ್ವಿಟರಿನಲ್ಲಿ ಈ ವಿಡಿಯೋ ವೈರಲ್‌ ಆಘುತ್ತಿದ್ದು, ಪರೀಕ್ಷೆಗೆ ಹಾಜರಾಗದಂತೆ ತಡೆದ ಬ್ರಿಮ್ಸ್‌ ಆಡಳಿತ ಮಂಡಳಿಯ ವಿರುದ್ಧ ಟೀಕೆಗಳು ಕೇಳಿ ಬರುತ್ತಿದೆ.

ಈ ಕುರಿತು ಇಂದು ಪ್ರಕಟನೆ ಹೊರಡಿಸಿರುವ ಬ್ರಿಮ್ಸ್‌ ಬೀದರ್‌ ವೈದ್ಯಕೀಯ ಶಿಕ್ಷಣ ಸಂಸ್ಥೆಯು, ನರ್ಸಿಂಗ್‌ ಪರೀಕ್ಷೆ ಬರೆಯಲು ಎಲ್ಲಾ ವಿದ್ಯಾರ್ಥಿಗಳಿಗೂ ಅನುಮತಿ ನೀಡಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯು ಸುಳ್ಳಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದ ಕುರಿತು ಯಾವುದೇ ಉಲ್ಲೇಖವನ್ನೂ ಮಾಡಿಲ್ಲ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News