ಸಿದ್ದರಾಮಯ್ಯ ರಾಜಕೀಯವಾಗಿ ನಿಶಕ್ತರಾಗುತ್ತಿದ್ದಾರೆ: ಸಿ.ಎಂ. ಇಬ್ರಾಹಿಂ

Update: 2022-02-13 12:44 GMT

ದಾವಣಗೆರೆ: ಕೆಲವರು ವಯಸ್ಸಾದ ನಂತರ ನಿಶಕ್ತರಾಗುತ್ತಾರೆ. ಆದರೆ, ಇನ್ನು ಕೆಲವರು ರಾಜಕೀಯದಲ್ಲಿ ನಿಶಕ್ತರಾಗಿದ್ದಾರೆ. ಸಿದ್ದರಾಮಯ್ಯ ರಾಜಕೀಯವಾಗಿ ನಿಶಕ್ತರಾಗುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಟೀಕಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಒಬ್ಬ ನಿಸ್ಸಹಯಾಕರು. ಸಿದ್ದರಾಮಯ್ಯ ಈ ರೀತಿ ಆಗಿದ್ದಕ್ಕೆ ಸಾಕಷ್ಟು ನನಗೆ ನೋವು ಇದೆ. ಬಲವಾಗಿದ್ದ ವ್ಯಕ್ತಿ ಈ ರೀತಿ ಆಗಿರುವುದು ನೋವು ಇದೆ ಎಂದು ಹೇಳಿದರು.

ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಕುಮಾರಸ್ವಾಮಿ?: ಮಾಜಿ ಸಿಎಂ ಹೇಳಿದ್ದು ಹೀಗೆ...

ನಮ್ಮದು ಲವ್ ಮ್ಯಾರೇಜ್ ಅಲ್ಲ. ಅರೆಂಜ್ ಮ್ಯಾರೇಜ್, ಮನವೊಲಿಸುವುದರಿಂದ ಏನು ಆಗಲ್ಲ. ಈ ಬಗ್ಗೆ ಹೈಕಮಾಂಡ್ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ರವಿವಾರವೇ ಮಧ್ಯಾಹ್ನ ಮೂರು ಗಂಟೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸುತ್ತೇವೆ. ಬೆಳಗಾವಿಯಲ್ಲಿ ಸಭೆ ಮಾಡಿ ನಂತರ ನನ್ನ ಮುಂದಿನ ನಿರ್ಧಾರ ಮಾಡುತ್ತೇವೆ ಎಂದರು.

ಗೋ ಹತ್ಯೆ ಬಿಲ್ ಮಂಡನೆ ಇದೆ. ನಾನು ರಾಜಿನಾಮೆ ನೀಡಿದರೆ ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಅದ್ದರಿಂದ ಅಧಿವೇಶನ ಮುಗಿದ ನಂತರ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ಇದಲ್ಲದೇ ನನಗೆ ಮಮತ ಬ್ಯಾನರ್ಜಿ, ಆಖಿಲೇಶ್ ಯಾದವ್, ಸೇರಿದಂತೆ ಹಲವರು ಕರೆ ಮಾಡಿದ್ದಾರೆ ಎಂದರು.

ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತೆ ಹೊತು ಪೂರ್ಣ ಬಹುಮತದ ಸರ್ಕಾರಗಳು ಯಾವುದೂ ಬರಲ್ಲ. ಕಾಂಗ್ರೆಸ್‍ನಲ್ಲಿ ನನ್ನನ್ನು ರಾಜಕೀಯ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಂಡಿದ್ದಾರೆ. ಕೌನ್ಸಿಲ್‍ನಲ್ಲಿ 21 ಜನ ಇದ್ದರೂ 19 ಜನ ನನ್ನ ಪರ ಇದ್ದರು. ಆದರೆ ವಿರೋಧ ಪಕ್ಷ ಸ್ಥಾನ ನೀಡದಿದ್ದಾಗ ಯಾವುದಕ್ಕೂ ಬಳಸಿಕೊಳ್ಳುತ್ತಾರೆ ಎನ್ನುವುದು ನಿಮಗೇ ಗೊತ್ತಾಗುತ್ತೆ. ನಮ್ಮ ಶಕ್ತಿಯೇ ನಮ್ಮ ಶತ್ರು ಆಗಿದೆ. ಕಾಂಗ್ರೆಸ್ ನಿಂದ ಬಹಳಷ್ಟು ಜನರು ಬರುವವರಿದ್ದಾರೆ. ಡ್ಯಾಂ ಹೊಡೆದಾಗ ಹೇಗೆ ನೀರು ಬರುತ್ತೋ ಅದೇ ರೀತಿ ಕಾಂಗ್ರೆಸ್ ನಲ್ಲಿದ್ದವರು ಬರುತ್ತಾರೆ ಎಂದು ಬಹಿರಂಗ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News