×
Ad

ಎಫ್‍ಐಆರ್ ದಾಖಲಾಗಿರುವ ಸಾರಿಗೆ ನೌಕರರಿಗೂ ಪುನಃ ಕೆಲಸ ಕೊಡಿ: ಎಚ್.ವಿ.ಅನಂತಸುಬ್ಬಾರಾವ್

Update: 2022-02-13 17:54 IST
 ಎಚ್.ವಿ.ಅನಂತಸುಬ್ಬಾರಾವ್

ಬೆಂಗಳೂರು, ಫೆ. 13: ‘ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿದ್ದ ಕೆಲ ಬಿಎಂಟಿಸಿ ನೌಕರರನ್ನು ಕೆಲಸಕ್ಕ್ಕೆ ವಾಪಸ್ಸು ತೆಗೆದುಕೊಂಡಿರುವುದು ಸಂತಸದ ವಿಷಯ. ಆದರೆ, ಎಫ್‍ಐಆರ್ ದಾಖಲಾಗಿರುವ ನೌಕರರನ್ನು ಕೈಬಿಟ್ಟಿರುವುದು ಸರಿಯಲ್ಲ' ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡೆರೇಷನ್‍ನ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್, ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದಾರೆ. 

‘ಎಫ್‍ಐಆರ್ ಅನ್ನು ನೌಕರರ ಮೇಲೆ ವಿನಾಃ ಕಾರಣ ದಾಖಲಿಸಿದ್ದಾರೆ. ಹೀಗಾಗಿ ಅದನ್ನು ಪರಿಶೀಲಿಸಿ ಕ್ರಮ ವಹಿಸಬೇಕೆಂದು ಹಿಂದಿನ ಸಭೆಯಲ್ಲಿ ಸಚಿವರ ಗಮನಕ್ಕೆ ತಂದಿದ್ದರು. ಆಗ ಸಚಿವರು ಪರಿಶೀಲಿಸುವುದಾಗಿ ತಿಳಿಸಿದ್ದರು. ಆದರೆ, ಫೆ.10ರಂದು ನಡೆದ ಸಮ್ಮೇಳನದಲ್ಲಿ ಬಿಎಂಎಸ್ ಸಂಘಟನೆಗೆ ಮಾತ್ರ ಆಹ್ವಾನ ನೀಡಿ ಉಳಿದ ಕಾರ್ಮಿಕ ಸಂಘಟನೆಗಳನ್ನು ಹೊರಗಿಡಲಾಗಿದೆ. ಈ ಮೂಲಕ ಸಚಿವರು ಬಿಎಂಎಸ್ ಸಂಘಟನೆಯನ್ನು ಕಟ್ಟಿ ಬೆಳೆಸಲು ಕಂಕಣಬದ್ದರಾಗಿರುವಂತೆ ಕಾಣುತ್ತದೆ. ಹೀಗಾಗಿ ಸಾರಿಗೆ ಸಂಸ್ಥೆಯನ್ನು ಬೆಳೆಸಲು ಪ್ರಾಮಾಣಿಕರಾಗಿ ಶ್ರಮಿಸುತ್ತಿರುವ ಸಂಘಟನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು' ಎಂದು ಅವರು ಆಗ್ರಹಿಸಿದ್ದಾರೆ.

‘ಸಾರಿಗೆ ಮುಷ್ಕರದ ಸಂದರ್ಭದಲ್ಲಿ ಕೆಲಸದಿಂದ ತೆಗೆದಿರುವ ಎಲ್ಲ ನೌಕರರನ್ನು ಬೇಷರತ್ತಾಗಿ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು. ಅವರ ಹಿಂದಿನ ಸೇವೆಯನ್ನು ಪರಿಗಣಿಸಬೇಕು. ಎಫ್‍ಐಆರ್ ಪ್ರಕರಣಗಳಲ್ಲೂ ಅಂತಹ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಪ್ರಕರಣಗಳಲ್ಲಿ ನ್ಯಾಯಾಲಯಗಳ ತೀರ್ಪಿನ ಆಧಾರದ ಮೇಲೆ ಮುಂದಿನ ತೆಗೆದುಕೊಳ್ಳಬಹುದು' ಎಂದು ಅನಂತ ಸುಬ್ಬರಾವ್ ಅವರು ಪತ್ರದಲ್ಲಿ ಸಚಿವರಿಗೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News