ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆ ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ

Update: 2022-02-13 15:18 GMT

ಮೈಸೂರು,ಫೆ.13: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮೂರು ಪಟ್ಟು ಜಾಸ್ತಿ ಸಾಲ ಮಾಡಿ ಹೋಗಿದ್ದಾರೆ. ಸಾಲ ಮಾಡದೆ ಆಡಳಿತ ನಡೆಸಿದ್ದಾರಾ ಸಿದ್ದರಾಮಯ್ಯ ಎಂದು ಹೇಳಲಿ. ಅರ್ಥ ವ್ಯವಸ್ಥೆ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮ್ಯ ಏನೆ ಹೇಳಿದರು ಮಾಧ್ಯಮದಲ್ಲಿ ಪ್ರಕಟವಾಗುತ್ತದೆ ಎಂದು ಹೇಳಿಕೆ ನೀಡುತ್ತಾರೆ ಅಷ್ಟೇ. ರಾಜ್ಯದಲ್ಲಿ ಇವರ ಆಡಳಿತದಲ್ಲೇ ಹೆಚ್ಚು ಸಾಲ ಉಂಟಾಗಿದೆ. ಕೆಂಗಲ್ ಹನುಮಂತಯ್ಯ ರಿಂದ ಜಗದೀಶ್ ಶೆಟ್ಟರ್ ವರೆಗಿನ ಸಾಲ ಹಾಗೂ ಸಿದ್ದರಾಮಯ್ಯ ಸರ್ಕಾರದ ಸಾಲವನ್ನ ಒಂದು ತಕ್ಕಡಿಗೆ ಇಟ್ಟರೆ, ಸಿದ್ದರಾಮಯ್ಯರದ್ದೇ ಹೆಚ್ಚು ಸಾಲ. ಸಾಲ ತಂದು ಕಾಂಗ್ರೆಸ್ ವೈಯಕ್ತಿಕ ಖಜಾನೆ ತುಂಬಿಸಿಕೊಂಡಿದೆ. ಸಾಲ ಮಾಡದೆ ಯಾವ ಸರ್ಕಾರ ನಡೆದಿದೆ ಸಿದ್ದರಾಮಯ್ಯ ತಿಳಿಸಲಿ. ತಾವೇ ಸಿಎಂ ಆಗಿದ್ದಾಗ ಪಾಲ್ಕನ್ ಫ್ಯಾಕ್ಟರಿ ಮುಚ್ಚಿದ್ದೇಕೆ. ಫ್ಯಾಕ್ಟರಿಯ ನೌಕರರ ಕೆಲಸ ಹೋಗಿದೆ. ಈ ಸಮಯದಲ್ಲಿ ಸಿಎಂ ಆಗಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ನೀಲಿ ಶಾಲು ಹಾಕುವವರೆಲ್ಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಓದಿ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಈ ದೇಶದ ಮುಸ್ಲಿಮರ ಬಗ್ಗೆ ಅಂದೇ ತಿಳಿದಿತ್ತು. ನೀಲಿ ಶಾಲು ಧರಿಸುವ ಮೊದಲು ವಾಸ್ತವ ತಿಳಿದುಕೊಳ್ಳಿ. ಅಂಬೇಡ್ಕರ್ ಅವರು ಬರೆದಿರುವ ಥಾಟ್ಸ್ ಆನ್ ಪಾಕಿಸ್ತಾನ್ ಓದಿಕೊಳ್ಳಿ. ಆ ಪುಸ್ತಕದಲ್ಲಿ ಎಲ್ಲ ವಿಚಾರವನ್ನು ಅಂಬೇಡ್ಕರ್ ತಿಳಿಸಿದ್ದಾರೆ. ನೀಲಿ ಶಾಲು ಧರಿಸುವ ಮುನ್ನ ಓಡಿಕೊಂಡರೆ ಒಳ್ಳೆಯದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಹಿಜಾಬ್ ಗಲಾಟೆಯ ಹಿಂದೆ ಕೆಎಫ್ ಡಿ, ಪಿಎಫ್ ಐ ಇದೆ. ಶಾಂತಿ ಕದಡಬೇಡಿ ಎಂದು ಮನವಿ ಮಾಡಬೇಡಿ. ಶಾಂತಿ ಕದಡುವವವರ ಮೇಲೆ ಕಠಿಣ ಕ್ರಮ ಕೈ ಗೊಳ್ಳಿ. ಸರಕಾರ ಕಠಿಣ ಕ್ರಮಕ್ಕೆ ಮುಂದಾಗಲೇಬೇಕು. ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿರುವವರು ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಮೊದಲು ಕೆಎಫ್ ಡಿ, ಪಿಎಫ್ ಐ ಸಂಘಟನೆ ಬಂದ್ ಮಾಡಿ. ಹಿಜಾಬ್ ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ. ಹಿಜಾಬ್ ಬಿಟ್ಟು ಕಿತಾಬ್ ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತೆ. ಹಿಜಾಬ್ ಅವರು ಬಿಟ್ಟು ಬಂದರೆ ಆ ಕ್ಷಣವೇ ಕೇಸರಿ ಶಾಲಿನ ಪ್ರಸ್ತಾಪವೇ ಇರಲ್ಲ ಎಂಧು ಸಂಸದ ಪ್ರತಾಪ್ ಸಿಂಹ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News