ಮಡಿಕೇರಿ: ಕೊಂಗಂಡ ಗಣಪತಿ ಅವರ ನಾಮಫಲಕ ಅಳವಡಿಸಲು ಎಸ್‍ಡಿಪಿಐ ಒತ್ತಾಯ

Update: 2022-02-13 15:54 GMT

ಮಡಿಕೇರಿ ಫೆ.13 : ನಗರದ ಗಣಪತಿ ಬೀದಿ ವಿಸ್ತರಣೆ ಸಂದರ್ಭ ಕೊಂಗಂಡ ಗಣಪತಿ ಅವರ ನಾಮಫಲಕವನ್ನು ತೆರವುಗೊಳಿಸಿದ್ದು, ಇದನ್ನು ಪುನರ್ ಸ್ಥಾಪಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

ನಗರಸಭಾಧ್ಯಕ್ಷರಾದ ಅನಿತಾ ಪೂವಯ್ಯ ಹಾಗೂ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಎಸ್‍ಡಿಪಿಐ ಪ್ರಮುಖ ಹಾಗೂ ನಗರಸಭೆಯ ಸದಸ್ಯ ಅಮಿನ್ ಮೊಹಿಸಿನ್ ನಾಮಫಲಕ ಅಳವಡಿಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಹಿಂದೆ ಉಪವಿಭಾಗಾಧಿಕಾರಿಗಳಾಗಿದ್ದ ದಿ.ಕೊಂಗಂಡ ಗಣಪತಿ ಅವರು ತಮ್ಮ ಸ್ವಂತ ಖರ್ಚಿನಿಂದ ಗಣಪತಿ ಬೀದಿಯ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಪಂಪಿನಕೆರೆಯಿಂದ ಪೈಪ್ ಲೈನ್ ಹಾಕಿಸಿದರು. ಇದರಿಂದ ಇತರ ಭಾಗಗಳ ನಿವಾಸಿಗಳಿಗೂ ಅನುಕೂಲವಾಗಿತ್ತು. ಗಣಪತಿ ಅವರ ನೆನಪಿಗಾಗಿ ಗಣಪತಿ ಬೀದಿ ಎಂದು ನಾಮಕರಣ ಮಾಡಲಾಗಿತ್ತು, ಅಲ್ಲದೆ ನಾಮಫಲಕವನ್ನು ಗಣಪತಿ ಬೀದಿಯ ನೀರಿನ ಟ್ಯಾಂಕ್ ಬಳಿ ಅಳವಡಿಸಲಾತ್ತು. ಆದರೆ ಇತ್ತೀಚೆಗೆ ನಗರಸಭೆ ಗಣಪತಿ ಬೀದಿಯನ್ನು ವಿಸ್ತರಿಸುವ ಸಂದರ್ಭ ಫಲಕವನ್ನು ತೆರವುಗೊಳಿಸಿತ್ತು ಎಂದು ಗಮನ ಸೆಳೆದರು.

ಗಣಪತಿ ಬೀದಿ ಎಸ್‍ಡಿಪಿಐ ಅಧ್ಯಕ್ಷ ಉಬೈದ್, ಕಾರ್ಯಕರ್ತರುಗಳಾದ ಜಲೀಲ್ ಹಾಗೂ ಅಮೀನ್ ನವಾಬ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News