ಮಡಿಕೇರಿ: ಆಟೋ ರಿಕ್ಷಾ ಡಿಕ್ಕಿ; ಪಾದಚಾರಿ ಬಾಲಕ ಮೃತ

Update: 2022-02-13 16:40 GMT

ಮಡಿಕೇರಿ ಫೆ.13 : ಆಟೋರಿಕ್ಷಾ ಡಿಕ್ಕಿಯಾಗಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾ.ಪಂ ಮುಂಭಾಗದಲ್ಲಿ ನಡೆದಿದೆ.

ಕೊಡಗರಹಳ್ಳಿ ನಿವಾಸಿ ಅಜೀಜ್ ಹಾಗೂ ಮೈಮುನ ದಂಪತಿಗಳ ಪುತ್ರ ಫಾಜಿಲ್ (6) ಮೃತಪಟ್ಟ ಬಾಲಕ. ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಫಾಜಿಲ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಆಟೋರಿಕ್ಷಾ ಹಾಗೂ ಚಾಲಕ ನವೀನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News