×
Ad

ಇ-ಸಾರಿಗೆ ವ್ಯವಸ್ಥೆಯೇ ಪರ್ಯಾಯ ಮಾರ್ಗ: ಸಚಿವ ಎಸ್.ಟಿ.ಸೋಮಶೇಖರ್

Update: 2022-02-13 23:07 IST

ಬೆಂಗಳೂರು, ಫೆ. 13: ಭಾರತದಲ್ಲಿ ಮಾಲಿನ್ಯ ಮಟ್ಟ ಮಿತಿ ಮೀರಿದ್ದು, ಇ-ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಪರ್ಯಾಯ ಮಾರ್ಗವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಲಿಕಾನ್ ನಗರಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇಡೀ ಜಗತ್ತು ನಗರದತ್ತ ನೋಡುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.  

ರವಿವಾರ ಸ್ಕೂಟರ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಎಲೆಕ್ಟ್ರಾನಿಕ್ ವಾಹನಗಳ ತಾಣವಾಗಿ ಬೆಳವಣಿಗೆಯಾಗುತ್ತಿದೆ. ಹಾಗಾಗಿ ಈ ಬಾರಿಯ ಬಜೆಟ್‍ನಲ್ಲಿ ಎಲೆಕ್ಟ್ರಾನಿಕ್ ವಾಹನ ವಲಯದ ಉತ್ತೇಜನಕ್ಕೆ ವಿಶೇಷ ಅನುದಾನ ದೊರೆಯುವ ನಿರೀಕ್ಷೆ ಇದೆ. ಕೇಂದ್ರ ಬಜೆಟ್‍ನಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ವಿಶೇಷ ಉತ್ತೇಜನ ನೀಡಿದ್ದು, ಪ್ರತಿ 5 ಕಿ.ಮೀ.ಗೆ ಚಾರ್ಜರ್ ಕೇಂದ್ರಗಳನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ. ಇಂಧನ ಉಳಿತಾಯ ಹಾಗೂ ಪರಿಸರ ಉಳಿಸುವುದಕ್ಕಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News